Advertisement

ಕಾಂಗ್ರೆಸ್‌ ಪಾಕಿಸ್ತಾನದಲ್ಲಿ ಗೆಲ್ಲಬೇಕಷ್ಟೆ!ಕೈ ಮುಖಂಡರಿಗೆ ಮತ್ತೆ ಸಿಎಂ ಹುದ್ದೆ ಕನಸು

05:19 PM Oct 21, 2020 | sudhir |

ಧಾರವಾಡ: ಕಾಂಗ್ರೆಸ್‌ನವರ ಮೀಸಲಾತಿ (ಕೋಟಾ) ಮುಗಿದಂತಾಗಿದ್ದು, ಈಗೇನಿದ್ದರೂ ಆ ಪಕ್ಷ ಪಾಕಿಸ್ತಾನದಲ್ಲಿ ಗೆಲ್ಲಬೇಕಷ್ಟೇ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಅವರಿಗೆ ತಮ್ಮ ತವರು ಜಿಲ್ಲೆಗಳಲ್ಲೇ ತಮ್ಮ ಪಕ್ಷ ಗೆಲ್ಲಿಸಲು ಆಗಲಿಲ್ಲ. ತಮ್ಮದೇ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ರಕ್ಷಣೆ ಕೊಡುವ ಕೆಲಸವನ್ನು ಕಾಂಗ್ರೆಸ್‌ ಮಾಡಲಿಲ್ಲ. ಇಂತಹ ಪಕ್ಷಕ್ಕೆ ಜನ ಯಾಕೆ ಮತ ಹಾಕಬೇಕು. ಸಮಾಜವನ್ನು ಮತ್ತೆ ಒಡೆಯುವುದಕ್ಕಾಗಿ ಮತ ಹಾಕಬೇಕಾ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಪ್ರವಾಹ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಶಕ್ತಿ ಮೀರಿ ಸ್ಪಂದನೆ ನೀಡುವ ಕೆಲಸ ಮಾಡಲಿದೆ. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ನಮಗೆ ಪ್ರಕೃತಿ ನಿಯಂತ್ರಣ ಮಾಡಲು ಬರಲ್ಲ,
ಆದರೆ ಕಷ್ಟಕ್ಕೆ ಸ್ಪಂದಿಸುವ ಕೆಲಸ ಸಾಗಿದೆ ಎಂದರು.

ಇದನ್ನೂ ಓದಿ:ಬಿಹಾರ ಚುನಾವಣೆ 2020: ಮೊದಲ ಹಂತದಲ್ಲಿ ಶೇ.31ರಷ್ಟು ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು!

ಕೋವಿಡ್‌ ಸಂಕಷ್ಟದಲ್ಲಿಯೂ ಶಶಿಕಲಾ ಜೊಲ್ಲೆ ಸ್ಪಂದನೆ ನೀಡಿದ್ದರೆ, ಗೋವಿಂದ ಕಾರಜೋಳ ಅವರ ಇಡೀ ಕುಟುಂಬ ಕೊರೊನಾದಿಂದ ಬಳಲುತ್ತಿದ್ದರೂ ಪ್ರವಾಹ ಪ್ರದೇಶಕ್ಕೆ ಹೋಗಿ ಸ್ಪಂದನೆ ನೀಡುವ ಕೆಲಸ ಮಾಡಿದ್ದಾರೆ. ಇದಲ್ಲದೇ ಪ್ರಭು ಚವ್ಹಾಣ, ಲಕ್ಷಣ ಸವದಿ ಕೂಡಾ ಸ್ಪಂದಿಸಿದ್ದಾರೆ. ಕಳೆದ ಬಾರಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಮೀರಿ ಪರಿಹಾರ ನೀಡಿದ್ದೇವೆ. ಈ ಹಿಂದಿನ ಸರ್ಕಾರಗಳಿಗಿಂತ ಹಾಗೂ ಬೇರೆ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಸರ್ಕಾರ ಸ್ಪಂದಿಸಿದೆ ಎಂದರು.

Advertisement

ಸಂಕನೂರ ಪರ ಪ್ರಚಾರ: ಕೃಷಿ ವಿವಿ ಸೇರಿದಂತೆ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಎಸ್‌.ವಿ.ಸಂಕನೂರ ಪರ ಪ್ರಚಾರ ಕೈಗೊಂಡ ಸಿ.ಟಿ. ರವಿ, ಬಳಿಕ ನಗರದ ನೌಕರರ ಸಂಘದ ಸಭಾಂಗಣದಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಕಾಂಗ್ರೆಸ್‌ ಪಕ್ಷ ದಲ್ಲಾಳಿಗಳ ಪರವಾಗಿದ್ದರೆ, ಬಿಜೆಪಿ ರೈತರ ಪರ ಕೆಲಸ ಮಾಡುತ್ತಿದೆ. ಬಿಜೆಪಿ ಜನರಿಗೆ ಕೊಟ್ಟ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಸಭೆಯ ಸಂಪೂರ್ಣ ವರದಿಯನ್ನು ಸಿ.ಟಿ.ರವಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next