Advertisement

ಪೀರನವಾಡಿ ಸಂಘರ್ಷದ ಹಿಂದೆ ರಾಜಕೀಯ ದುರುದ್ದೇಶವೂ ಇರಬಹುದು: ಸಚಿವ ಸಿ.ಟಿ. ರವಿ

04:32 PM Aug 28, 2020 | sudhir |

ಚಿಕ್ಕಮಗಳೂರು : ಬೆಳಗಾವಿಯ ಪೀರನವಾಡಿಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಈಗ ಸಂಘರ್ಷದ ರೂಪ ಪಡೆದಿರುವುದು ದುರಾದೃಷ್ಟಕರ ಇಂತಹ ಸಂಘರ್ಷದ ಹಿಂದೆ ರಾಜಕೀಯ ದುರುದ್ದೇಶ ಇರಬಹುದು ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದ ಹಿಂದೆ ರಾಜಕೀಯ ದುರ್ಬಳಕೆ ನಡೆದಿದೆ ಅದೇ ಜನರು ಈ ರೀತಿ ದುರ್ಬಳಕೆ ಮಾಡಿಕೊಳ್ಳುವ ಸಂಚಿನ ಸಾಧ್ಯತೆ ಇದೆ ಒಂದು ವೇಳೆ ಸಂಚು ರೂಪಿಸುವ ಹಂತದಲ್ಲಿದ್ರೆ ತನಿಖೆ ನಡೆಸುವ ಅವಶ್ಯಕತೆ ಇದೆ ಸಂಗೊಳ್ಳಿರಾಯಣ್ಣ ಪ್ರತಿಮೆ ಆಗಲೇಬೇಕು, ಚೆನ್ನಾಗಿ ಆಗಬೇಕು ಎಂದು ಚಿಕ್ಕಮಗಳೂರು ಶಾಸಕ ಸಿ. ಟಿ. ರವಿ ಹೇಳಿಕೆ ನೀಡಿದ್ದಾರೆ.

Advertisement

ಸಂಗೊಳ್ಳಿರಾಯಣ್ಣ ಪ್ರತಿಮೆ ವಿವಾದದ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವರು ಪ್ರತಿಮೆ ವಿವಾದ ಸ್ವರೂಪ ಪಡೆಯಬಾರದು ರಾಯಣ್ಣ ಪ್ರತಿಮೆ ನಿರ್ಮಾಣವಾಗಲೇಬೇಕು ಸಂಗೊಳ್ಳಿರಾಯಣ್ಣ ಹೆಸರು ಇಡೋದು ಹೆಮ್ಮೆಯ ವಿಷಯ ಏನೇ ಅಡೆತಡೆ ಇದ್ರು ಬಗೆಹರಿಸೋದಾಗಿ ಮುಖ್ಯಮತ್ರಿಗಳು ಹೇಳಿದ್ದಾರೆ ಎಂದರು.

ಸಿದ್ದರಾಮಯ್ಯ ಟ್ವಿಟ್ ವಿಚಾರವಾಗಿ ಮಾತನಾಡಿದ ಸಚಿವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು ಕಾಗಿನೆಲೆ ಸ್ವಾಮೀಜಿ ಭೇಟಿ ಮಾಡಿದ್ದಾಗ ಸಿಎಂ ಸಂಗೊಳ್ಳಿರಾಯಣ್ಣ ಪ್ರತಿಮೆ ನಿರ್ಮಾಣ ಮಾಡೋದಾಗಿ ಹೇಳಿದ್ರು ಗೊಂದಲ ಸೃಷ್ಟಿ ಮಾಡೋದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂಚು ಅನ್ನೋದು ಸ್ಪಷ್ಟ ಈ ಹಿನ್ನೆಲೆ ಸಿಎಂ ಆಗಿದ್ದವರು ಯೋಚಿಸಸಬೇಕು ನಾಳೆ ಮತ್ತೊಬ್ಬರು ಸಿಎಂ ಆಗಬಹುದು ಅವರ ಆದೇಶ ಅಂತಿಮ ತಾನೇ ಏನಾದ್ರು ಮಾಡಿ ರಾಜ್ಯದ ಜನರ ನೆಮ್ಮದಿ ಹಾಳುಮಾಡುವ ಸಂಚು ನಡೆದಿದೆ ಸಂಚಿಗೆ ಸಿದ್ದರಾಮಯ್ಯನವರು ಬಲಿಯಾಗಬಾರದು ಎಂದು ಸಚಿವ ಸಿ.ಟಿ. ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next