Advertisement

ಸಿ.ಟಿ.ರವಿ,ಈಶ್ವರಪ್ಪಗೆ  ಇತಿಹಾಸ ಗೊತ್ತಿಲ್ಲ : ಧ್ರುವ

04:30 PM Aug 16, 2021 | Team Udayavani |

ಹನೂರು: “ಸಚಿವ ಈಶ್ವರಪ್ಪ ಮತ್ತು ಸಿ.ಟಿ.ರವಿನಾಲಾಯಕ್‌ಗಳು. ಇವರು ಪ್ರಜಾಪ್ರಭುತ್ವದ ಮೇಲೆನಂಬಿಕೆ ಇಲ್ಲದವರು. ಹೀಗಾಗಿ ರಾಷ್ಟ್ರನಾಯಕರಿಗೆಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ’ ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಟೀಕಿಸಿದರು.

Advertisement

ಪಟ್ಟಣದಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌, ಸಿ.ಟಿ.ರವಿಯವರ ಮಾತು ದುರಹಂಕಾರದ ಪರಮಾವಧಿಯಮಾತು, ಅವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ಇತಿಹಾಸ ತಿಳಿಯದವನು ಇತಿಹಾಸಸೃಷ್ಟಿಸಲಾರ ಎಂದು ಹೇಳಿದ್ದಾರೆ. ಸಿ.ಟಿ.ರವಿಯವರಿಗೆಇಂದಿರಾಗಾಂಧಿಯವರ ತ್ಯಾಗದ ಬಗ್ಗೆ ಅರಿವಿಲ್ಲ. ಈದೇಶಕ್ಕೆ ನಿಜವಾದ ಅನ್ನಪೂರ್ಣೇಶ್ವರಿ ಎಂದರೇ ಅದು

ದಿ.ಇಂದಿರಾಗಾಂಧಿಯವರು.ಹೀಗಾಗಿಆಹೆಸರನ್ನುಇಡಲಾಗಿದೆ.ಮೊದಲುಬಿಜೆಪಿನಾಯಕರುರಾಷ್ಟ್ರನಾಯಕರಿಗೆಅಗೌರವ ತರುವಕೆಲಸ ನಿಲ್ಲಿಸಬೇಕು ಎಂದರು.ಅನುದಾನತಂದುನವಕರ್ನಾಟಕನಿರ್ಮಾಣಮಾಡಲಿ:ಸ್ವಾತಂತ್ರÂ ದಿನಾಚರಣೆಯಲ್ಲಿ ಮುಖ್ಯಮಂತ್ರಿಬೊಮ್ಮಾಯಿಯವರು ಇಂದಿನಿಂದ ನವಕರ್ನಾಟಕನಿರ್ಮಾಣವಾಗಲಿದೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ,ಕರ್ನಾಟಕ ರಾಜ್ಯವನ್ನು ನವ ಕರ್ನಾಟಕವನ್ನಾಗಿಮಾಡಲು ಕಾಂಗ್ರೆಸ್‌ ಕೆ.ಸಿ.ರೆಡ್ಡಿ ಅವರ ಕಾಲದಿಂದಸಿದ್ದರಾಮಯ್ಯ ಅವರಕಾಲದವರೆಗೂ ಪ್ರತಿಯೊಬ್ಬರೂಕೊಡುಗೆ ನೀಡಿದ್ದಾರೆ.

ಎಸ್‌.ಎಂ.ಕೃಷ್ಣ ಅವರಅವಧಿಯಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಅವಕಾಶನೀಡಿದ್ದರಿಂದ ಬೆಂಗಳೂರು ವಿಶ್ವಮಟ್ಟದಲ್ಲಿ ಗಮನಸೆಳೆದಿದೆ. ಅಲ್ಲದೆ ರಾಜ್ಯಕ್ಕೆ ಅತಿ ಹೆಚ್ಚಿನ ಆದಾಯಬರುತ್ತಿದೆ. ಅಲ್ಲದೆ ಸಿದ್ದರಾಮಯ್ಯ ಅವರೂ ಹಲವಾರುಕೊಡುಗೆ ನೀಡಿದ್ದಾರೆ. ಆದರೆ ಬಿಜೆಪಿಯವರು7 ವರ್ಷರಾಜ್ಯದಲ್ಲಿ ಅಧಿಕಾರ ನಡೆಸಿದ್ದು ಮೊದಲ 5 ವರ್ಷದಲ್ಲಿಭ್ರಷ್ಟಾಚಾರದಲ್ಲಿನಿರತರಾಗಿ3ಜನಮುಖ್ಯಮಂತ್ರಿಗಳನ್ನುಮಾಡಲಾಗಿತ್ತು. ಇದೀಗ ಮತ್ತೂಮ್ಮೆ ಭ್ರಷ್ಟಾಚಾರದಕಾರಣದಿಂದ ಯಡಿಯೂರಪ್ಪ ಅವರನ್ನು ಪದಚ್ಯುತಿಮಾಡಲಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರುಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿದ್ದಜಿಎಸ್‌ಟಿ ಬಾಕಿ, ಪ್ರವಾಹ ಪರಿಹಾರ, ವ್ಯಾಕ್ಸಿನೇಷನ್‌ತಂದು ನವಕರ್ನಾಟಕ ನಿರ್ಮಾಣ ಮಾಡಲಿ ಎಂದುಕುಹುಕವಾಡಿದರು.ಈ ಸಂದರ್ಭದಲ್ಲಿ ಶಾಸಕ ಆರ್‌.ನರೇಂದ್ರ, ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಈಶ್ವರ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next