ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಮುಂಬರುವ ವಿಧಾನ ಮಂಡಲ ಅಧಿವೇಶನದ ಆರಂಭದ ಎರಡು ದಿನ ಸಂವಿಧಾನ ಕುರಿತು ಚರ್ಚೆ, ವಿಚಾರ ವಿನಿಮಯ ಹಮ್ಮಿಕೊಂಡಿರುವ ನಿರ್ಧಾರ ಸರಿಯಾಗಿದೆ. ಅತಿವೃಷ್ಟಿ, ರೈತರ ಸಮಸ್ಯೆ, ರಾಜ್ಯದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು ಅಧಿವೇಶನದಲ್ಲಿ ಸಾಕಷ್ಟು ಕಾಲಾವಕಾಶ ಸಿಗಲಿದೆ. ಸಂವಿಧಾನದ ಕುರಿತು ಚರ್ಚೆ ನಡೆಸುವುದರಿಂದ ಉಳಿದ ಸಮಸ್ಯೆಗಳ ಬಗ್ಗೆ ಚರ್ಚೆಗೆ ತೊಂದರೆಯಾಗಲಿದೆ ಎಂಬ ಅನಿಸಿಕೆ ಸರಿಯಲ್ಲ. ಎಲ್ಲ ಜನಪ್ರತಿನಿಧಿಗಳಿಗೂ ಸಂವಿಧಾನದ ಕಾರ್ಯವೈಖರಿ, ಕಾರ್ಯವ್ಯಾಪ್ತಿ ಬಗ್ಗೆ ಸಂಪೂರ್ಣ ಅರಿವು ಇರುವುದಿಲ್ಲ. ಹೀಗಾಗಿ, ಅನೇಕ ವೇಳೆ ಸಂವಿಧಾನವನ್ನು ತಪ್ಪಾಗಿ ಅರ್ಥೈಸುವ ಅಪಾಯವಿರುತ್ತದೆ. ಈಗ ಸಿಎಎ ವಿರುದ್ಧ ಕೇಳಿ ಬರುತ್ತಿರುವ ಸುಳ್ಳು ಸುದ್ದಿಗಳಿಗೂ ಇದೇ ಕಾರಣ. ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದನ್ನು ಅನೇಕರು ತಪ್ಪಾಗಿ ಗ್ರಹಿಸಿದ್ದಾರೆ. ಇದುವರೆಗೆ ಸಂವಿಧಾನ ಎಷ್ಟು ಬಾರಿ ತಿದ್ದುಪಡಿಯಾಗಿಲ್ಲ ಎಂದು ಪ್ರಶ್ನಿಸಿದರು.
Advertisement
ಬಂಜಾರಾ ಅಕಾಡೆಮಿ:ಈ ಬಾರಿಯ ಬಜೆಟ್‌ನಲ್ಲಿ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಘೋಷಣೆ ಮಾಡಲಾಗುವುದು. ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ರಚನೆಗೆ ಆ ಸಮುದಾಯದವರಿಂದ ಮನವಿ ಮಾಡಲಾಗಿತ್ತು. ಈ ಬಗ್ಗೆ ಸಿಎಂ ಜತೆ ಚರ್ಚಿಸಿದ್ದೇನೆ ಎಂದರು.