Advertisement
ಮುಂಬಯಿ: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ)ನಲ್ಲಿರುವ ಔಟ್‌ಸ್ಟೇಷನ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸುವ ಸಲುವಾಗಿ ಮಧ್ಯ ರೈಲ್ವೆಯು ಅದನ್ನು ಏರ್‌ಪೋರ್ಟ್ ಲಾಂಜ್ ಮಾದರಿಯಲ್ಲಿ ಮಾರ್ಪಾಡು ಮಾಡುವ ಕೆಲಸವನ್ನು ಪ್ರಾರಂಭಿಸಿದೆ. ಒಮ್ಮೆ ಮಾರ್ಪಡಿನ ಕೆಲಸ ಪೂರ್ಣಗೊಂಡ ಅನಂತರ ಪ್ಲ್ಯಾಟ್‌ಫಾರ್ಮ್ ಸಂಖ್ಯೆ 14 ಮತ್ತು 15ರ ಕಡೆಗೆ ಹೋಗುವ ದಾರಿಯು ಒಂದು ಹೊಸ ನೋಟವನ್ನು ಪಡೆಯಲಿದೆ.
Related Articles
ಪಾರ್ಸೆಲ್ ಆಫೀಸ್ ಟರ್ಮಿನಸ್‌ನ ಪಿಟ್ ಲೈನ್ ಕಡೆಗೆ ಸ್ಥಳಾಂತರಗೊಂಡಿದೆ ಮತ್ತು ಲಿನಿನ್ ಕೊಠಡಿಯನ್ನು ಅದೇ ಪ್ರದೇಶದಲ್ಲಿ ಸ್ಥಳಾಂತರಿಸಲಾಗುವುದು. ಓಟ್‌ಸ್ಟೇಷನ್ (ಹೊರನಿಲ್ದಾಣಗಳ) ಪ್ರಯಾಣಿಕರಿಗೆ ಹೊಸ ವೈಟಿಂಗ್ ರೂಮ್‌ನ (ನಿರೀಕ್ಷಣ ಕೊಠಡಿ) ಸ್ಥಾಪನೆ ಕೂಡಾ ಯೋಜನೆಯ ಭಾಗವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ ಲೇನ್‌ನಲ್ಲಿ ಮರುಬಳಕೆಯ ಕಾರ್ಡ್‌ಬೋರ್ಡ್‌ನಿಂದ ಮಾಡಲ್ಪಟ್ಟ ಒಂದು ಉಗಿ ಲೋಕೋಮೋಟಿವ್ ಮತ್ತು ಕೋಚ್‌ನ ಮಾದರಿ ಇರಿಸಲಾಗಿದೆ. ಅದನ್ನು ತೆಗೆದುಹಾಕಲಾಗುವುದು ಮತ್ತು ಅದರ ಸ್ಥಳದಲ್ಲಿ ಭಾರತೀಯ ರೈಲ್ವೇಯ ಪರಂಪರೆಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement
ಯುನೆಸ್ಕೊ ಪ್ರಮಾಣೀಕೃತ ಪಾರಂಪರಿಕ ಕಟ್ಟಡವಾದ ಸಿಎಸ್‌ಎಂಟಿ ಕಟ್ಟಡದ ಪುನಃಸ್ಥಾಪನೆಯ ಕೆಲಸದ ಮೇಲೆ ಮಧ್ಯ ರೈಲ್ವೇ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಕಟ್ಟಡಕ್ಕೆ ಅದರ ಹಿಂದಿನ ವೈಭವವನ್ನು ಮರಳಿ ನೀಡಲು 41 ಕೋಟಿ ರೂ.ಗಳ ಯೋಜನೆಯನ್ನು ಹೊಂದಲಾಗಿದೆ.
ಪ್ಲ್ಯಾಟ್‌ಫಾರ್ಮ್ ಸಂಖ್ಯೆ 14 ಮತ್ತು 15ರ ಕಡೆಗೆ ಹೋಗುವ ಲೇನ್‌ಗೆ ಆಧುನಿಕ ಸೌಕರ್ಯಗಳು ಮತ್ತು ಸುಧಾರಿತ ಬೆಳಕುಗಳಿಂದ ಅಲಂಕರಿಸಲಾಗುವುದು. ಇದು ಪ್ರಯಾಣಿಕರಿಗೆ ಹೊಸ ಅನುಭವವನ್ನು ಒದಗಿಸಲಿದೆ. ಪಾರಂಪರಿಕ ಸ್ಟೀಮ್ ಇಂಜಿನ್‌ಗಳು, ಮೊದಲ ಲೋಕಲ್ ರೈಲು ಮತ್ತು ಬೆಟ್ಟಗಳಲ್ಲಿನ ರೈಲ್ವೇಗಳ ಫೋಟೋಗಳ ಚಿತ್ರಗಳನ್ನು ಇರಿಸುವ ಮೂಲಕ ಲೇನ್‌ಗೆ ಒಂದು ಪಾರಂಪರಿಕ ನೋಟವನ್ನು ನೀಡುವ ಬಗ್ಗೆಯೂ ಮಧ್ಯ ರೈಲ್ವೇಯು ಚಿಂತನೆ ನಡೆಸಿದೆ.– ಎ.ಕೆ. ಜೈನ್,ಹಿರಿಯ ಜನಸಂಪರ್ಕಾಧಿಕಾರಿ,ಮಧ್ಯ ರೈಲ್ವೇ