ಮುಂಬಯಿ: ಮುಂಬಯಿಯ nಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ನಲ್ಲಿ ಪ್ಲಾಟ್ ಫಾರ್ಮ್ ಗಳ ವಿಸ್ತರಣೆ ಕಾರ್ಯವು ಪ್ರಗತಿಯಲ್ಲಿದ್ದು, ಶೇ. 80ರಷ್ಟು ಮುಖ್ಯ ಕೆಲಸಗಳು ಪೂರ್ಣಗೊಂಡಿವೆ. ಯೋಜನೆಯು ಪೂರ್ಣಗೊಂಡ ಬಳಿಕ ಪ್ರಯಾಣಿಕರು 10, 11, 12 ಮತ್ತು 13 ನಂಬರ್ ಪ್ಲಾಟ್‌ಫಾರ್ಮ್
ಗಳಲ್ಲಿ 24 ಕೋಚ್‌ಗಳನ್ನು ಹೊಂದಿರುವ ರೈಲುಗಳನ್ನು ಹತ್ತಲು ಸಾಧ್ಯವಾಗಲಿದೆ.
ಈ ವರ್ಷದ ಅಂತ್ಯದೊಳಗೆ ಸಿಎಸ್ ಎಂಟಿಯ ಪ್ಲಾಟ್‌ಫಾರ್ಮ್ ವಿಸ್ತರಣೆ ಕಾರ್ಯವನ್ನು ಪೂರ್ಣಗೊಳಿಸಲು ಗುರಿಯನ್ನು ಹೊಂದಿದ್ದೇವೆ. ವಿಸ್ತರಣೆ ಕಾರ್ಯ ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ಸಿಎಸ್ ಎಂಟಿ ವರ್ಧಿತ ಮೂಲ ಸೌಕರ್ಯ ನೀಡಲಿದೆ ಎಂದು ಕೇಂದ್ರ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ|
ಶಿವರಾಜ್ ಮನಸ್ಪುರೆ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ 10 ಮತ್ತು 11 ಪ್ಲಾಟ್‌ಫಾರ್ಮ್ ಗಳು 13 ಕೋಚ್ ರೈಲುಗಳನ್ನು ಮಾತ್ರ ನಿರ್ವಹಿಸಬಲ್ಲವು. ಆದರೆ ಪ್ಲಾಟ್‌ಫಾರ್ಮ್ 12 ಮತ್ತು 13 ನಂಬರ್‌ಗಳಲ್ಲಿ 17 ಕೋಚ್ ಹೊಂದಿರುವ ರೈಲುಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕಾಂಗಾರಿ ಸುಮಾರು ಶೇ. 80ರಷ್ಟು ಕೆಲಸ ಪೂರ್ಣಗೊಂಡಿದ್ದು, ಇಲ್ಲಿ 24 ಕೋರ್ಚ್‌ಗಳನ್ನು ಹೊಂದಿರುವ ರೈಲುಗಳಿಗೆ ಅವಕಾಶ ಕಲ್ಪಿಸಲಾಗಿದೆ ದೂರದ ರೈಲುಗಳಿಗೆ ಸಹಕಾರಿ ವಿಸ್ತರಣೆ ಕಾರ್ಯ ಪೂರ್ಣಗೊಂಡ
ಅನಂತರ ಈ ಎಲ್ಲ ನಾಲ್ಕು ಪ್ಲಾಟ್ ಫಾರ್ಮ್ ಗಳು 24 ಕೋಚ್‌ಗಳವರೆಗೆ ದೂರ ಸಂಚಾರದ ರೈಲುಗಳಿಗೆ ಅವಕಾಶ
ಕಲ್ಪಿಸಲು ಸಾಧ್ಯವಾಗಲಿದೆ. ದೀರ್ಘ ಪ್ಲಾಟ್‌ಫಾರ್ಮ್ ಕೊರತೆಯಿಂದಾಗಿ ಲೋಕಮಾನ್ಯ ತಿಲಕ್ ಟರ್ಮಿನಸ್‌ನಂತಹ ಇತರ ನಿಲ್ದಾಣಗಳಿಗೆ ದೂರದ ರೈಲುಗಳನ್ನು ತಿರುಗಿಸುವ ಅಗತ್ಯವನ್ನು ನಿವಾರಿಸಲಿದೆ.
1,000ಕ್ಕೂ ಹೆಚ್ಚು ಲೋಕಲ್
ರೈಲುಗಳ ಕಾರ್ಯಾಚರಣೆ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣವು ಮುಂಬಯಿಯ ಅತ್ಯಂತ ಜನ
ನಿಬಿಡ ನಿಲ್ದಾಣವಾಗಿದ್ದು, 45 ಜೋಡಿ ದೂರದ ರೈಲುಗಳು ಮತ್ತು 1,000ಕ್ಕೂ ಹೆಚ್ಚು ಲೋಕಲ್ ರೈಲುಗಳ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ. ಪ್ರತೀ ದಿನ ಸುಮಾರು 10.5 ಲಕ್ಷ ಪ್ರಯಾಣಿಕರು ಭೇಟಿ ನೀಡುತ್ತಿದ್ದು, ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಪ್ಲಾಟ್‌ಫಾರ್ಮ್ ವಿಸ್ತರಣೆ ಕಾರ್ಯ ನಡೆಯುತ್ತಿದೆ.
Related Articles
ಯಾರ್ಡ್ ಲೈನ್‌ಗಳ ಬದಲಾವಣೆ
ಪ್ಲಾಟ್‌ಫಾರ್ಮ್ ವಿಸ್ತರಣೆಗೆ ಹೆಚ್ಚುವರಿಯಾಗಿ ಉದ್ದದ ರೈಲುಗಳಿಗೆ ಅವಕಾಶ ಕಲ್ಪಿಸಲು ಸಿಎಸ್‌ಎಂಟಿಯಲ್ಲಿ ಅಸ್ತಿತ್ವದಲ್ಲಿರುವ ಯಾರ್ಡ್ ಲೈನ್‌ಗಳಿಗೆ ಬದಲಾವಣೆಯ ಅಗತ್ಯವಿದೆ. ಪ್ಲಾಟ್‌ಫಾರ್ಮ್ ವಿಸ್ತರಣೆಯೊಂದಿಗೆ ಏಕಕಾಲದಲ್ಲಿ ಕೆಲಸವನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ
ಅಧಿಕಾರಿ ಡಾ| ಶಿವರಾಜ್ ಮನಸ್ಪುರೆ ಅವರು ತಿಳಿಸಿದ್ದಾರೆ.
62.43 ಕೋ. ರೂ. ವೆಚ್ಚ
ಈ ಬೃಹತ್ ಯೋಜನೆಯ ಅಂದಾಜು ವೆಚ್ಚ 62.43 ಕೋಟಿ ರೂ. ಗಳಾಗಿದ್ದು, 2015-16ರಲ್ಲಿ ಮಂಜೂರಾದ ಯೋಜನೆಯ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ 10, 11ನೇ ಪ್ಲಾಟ್‌ಫಾರ್ಮ್ಗಳನ್ನು ಪ್ರಸ್ತುತ ಉದ್ದ 298 ಮೀ.ಗಳಿಂದ 680 ಮೀ. ಗಳಿಗೆ, ಎರಡನೇ ಹಂತದಲ್ಲಿ ಉದ್ದವಿರುವ12, 13ನೇ ಪ್ಲಾಟ್‌ಫಾರ್ಮ್ಗಳನ್ನು ಪ್ರಸ್ತುತ ಉದ್ದ 385 ಮೀ. ಗಳಿಂದ 690 ಮೀ. ಗಳಿಗೆ ವಿಸ್ತರಿಸಲಾಗುವುದು.
18 ಪ್ಲಾರ್ಟ್‌ಫಾರ್ಮ್ ಗಳು
ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದಲ್ಲಿ 18 ಪ್ಲಾರ್ಟ್‌ಫಾರ್ಮ್ ಗಳಿದ್ದು, ಇವುಗಳಲ್ಲಿ 7 ಪ್ಲಾಟ್‌ಫಾರ್ಮ್ ಗಳ ನ್ನುಉಪನಗರ ರೈಲು ಕಾರ್ಯಾಚರಣೆಗೆ ಕಾಯ್ದಿರಿಸಲಾಗಿದೆ. ಉಳಿದ 8ರಿಂದ 18 ನಂಬರ್ ವರೆಗಿನ ಪ್ಲಾಟ್‌ಫಾರ್ಮ್ ಗಳು ದೂರದ ರೈಲು ಕಾರ್ಯಾಚರಣೆಗೆ ಬಳಸಲಾಗುತ್ತಿದೆ ಎಂದು ಸೆಂಟ್ರಲ್ ರೈಲ್ವೇಯ ಅಧಿಕಾರಿ ತಿಳಿಸಿದ್ದಾರೆ.
ಪ್ಲಾಟ್‌ಫಾರ್ಮ್ ವಿಸ್ತರಣೆ ಕಾರ್ಯವು ಅತ್ಯಂತ ಸವಾಲಿನ ಕೆಲಸವಾಗಿದ್ದು, ಅಸ್ತಿತ್ವದಲ್ಲಿರುವ ರೈಲು ಮಾರ್ಗಗಳನ್ನು ತೆಗೆಯುವುದು, ಸ್ಥಳಾಂತರಿಸುವುದು ಸಹಿತ ವಿವಿಧ ಕೆಲಸವನ್ನು ಒಳಗೊಂಡಿರುತ್ತದೆ. ಯಾವುದೇ ರೈಲುಗಳ ರದ್ದತಿಯಿಲ್ಲದೆ ಹೊರ ರಾಜ್ಯ ಮತ್ತು ಸ್ಥಳೀಯ ಸಂಚಾರವನ್ನು ಸರಾಗವಾಗಿ ಚಲಿಸುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.
-ಡಾ| ಶಿವರಾಜ್ ಮನಸ್ಪುರೆ
ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕೇಂದ್ರ ರೈಲ್ವೇ