Advertisement

ಚೆನ್ನೈ ತಂಡಕ್ಕೆ ಬಿಗ್ ಶಾಕ್; ಕೋಟಿ ವೀರ ದೀಪಕ್ ಚಾಹರ್ ಈ ಬಾರಿ ಐಪಿಎಲ್ ಆಡುವುದು ಅನುಮಾನ!

11:19 AM Mar 03, 2022 | Team Udayavani |

ಮುಂಬೈ: ಮೆಗಾ ಹರಾಜಿನಲ್ಲಿ ಬರೋಬ್ಬರಿ 14 ಕೋಟಿ ರೂ. ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದ ವೇಗಿ ದೀಪಕ್ ಚಾಹರ್ ಈ ಬಾರಿ ಐಪಿಎಲ್ ನಲ್ಲಿ ಆಡುವುದೇ ಅನುಮಾನ ಎನ್ನಲಾಗಿದೆ. ಚಾಹರ್ ಗಾಯದ ಸಮಸ್ಯೆ ಸಿಎಸ್ ಕೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

Advertisement

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ಗಾಯಗೊಂಡಿದ್ದ ದೀಪಕ್ ಚಾಹರ್ ಲಂಕಾ ವಿರುದ್ಧ ಸರಣಿಯಿಂದ ಹೊರಬಿದ್ದಿದ್ದರು. ದೀಪಕ್ ಗೆ ಹಲವು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ವರದಿಯಾಗಿದೆ. ಹೀಗಾಗಿ ಸಂಪೂರ್ಣ ಅಲ್ಲದಿದ್ದರೂ ಐಪಿಎಲ್ ಕೂಟದ ಬಹುತೇಕ ಪಂದ್ಯಗಳನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಚಾಹರ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ದೀಪಕ್ ಆರೋಗ್ಯದ ಕುರಿತಾಗಿ ಎನ್ ಸಿಎ ಅಧಿಕಾರಿಗಳ ಅಂತಿಮ ಮೌಲ್ಯಮಾಪನಕ್ಕಾಗಿ ಸಿಎಸ್ ಕೆ ಕಾಯುತ್ತಿದೆ. ಚಾಹರ್ ಸಂಪೂರ್ಣ ಅಲಭ್ಯರಾದರೆ ಸಿಎಸ್ ಕೆ ಬೇರೆ ಬೌಲರ್ ನ್ನು ಖರೀದಿ ಮಾಡಬೇಕಾಗಿದೆ.

ಚಾಹರ್ ಅಲಭ್ಯತೆ ಎಂಎಸ್ ಧೋನಿ ನೇತೃತ್ವದ ತಂಡಕ್ಕೆ ನಿಸ್ಸಂಶಯವಾಗಿ ದೊಡ್ಡ ಹೊಡೆತ ನೀಡಿದೆ. ಬಿಡ್ಡಿಂಗ್ ನಲ್ಲಿ ಭಾರೀ ಪೈಪೋಟಿ ಎದುರಿಸಿದ್ದ ಸಿಎಸ್ ಕೆ ಬರೋಬ್ಬರಿ 14 ಕೋಟಿ ರೂ. ನೀಡಿ ಚಾಹರ್ ರನ್ನು ಖರೀದಿ ಮಾಡಿತ್ತು.

ಇದನ್ನೂ ಓದಿ:ಎರಡು ಸ್ಥಾನಕ್ಕೆ ಮೂವರ ಸ್ಪರ್ಧೆ: ಟೆಸ್ಟ್ ತಂಡದಲ್ಲಿ ಪೂಜಾರ- ರಹಾನೆ ಸ್ಥಾನ ತುಂಬುವವರು ಯಾರು?

Advertisement

ಮಾರ್ಚ್ 26ರಂದು ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಸಿಎಸ್ ಕೆ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಐಪಿಎಲ್‌ನ ಲೀಗ್ ಹಂತವನ್ನು ಮುಂಬೈ ಮತ್ತು ಪುಣೆಯಲ್ಲಿ ನಡೆಸಲಾಗುತ್ತಿದೆ. ವಾಂಖೆಡೆ ಸ್ಟೇಡಿಯಂ ಮತ್ತು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಲಾ 20 ಪಂದ್ಯಗಳನ್ನು ಆಯೋಜಿಸಿದರೆ, ಡಿವೈ ಪಾಟೀಲ್ ಕ್ರೀಡಾಂಗಣ ಮತ್ತು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ 15 ಪಂದ್ಯಗಳನ್ನು ಆಯೋಜಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next