Advertisement
ಕೂಟದ ಆರಂಭಿಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಒಂದು ವಿಕೆಟ್ ಅಂತರದಿಂದ ಸೋತು ಆಘಾತಕ್ಕೆ ಒಳಗಾಗಿದ್ದ ಮುಂಬೈ ತಂಡವು ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಯೋಚಿಸುತ್ತಿದೆ. ಆದರೆ ಉಭಯ ತಂಡಗಳ ಬಲಾಬಲವನ್ನು ಗಮನಿಸಿದರೆ ಚೆನ್ನೈ ತಂಡವೇ ಬಲಿಷ್ಠವಾಗಿ ಕಾಣುತ್ತಿದೆ. ಸತತ ಸೋಲು ಕಂಡಿರುವ ಮುಂಬೈಗೆ ಅದೃಷ್ಟದ ಕೊರತೆಯೂ ಇದೆ. ಅದೇ ಚೆನ್ನೈ ಅದೃಷ್ಟದ ಬಲದಿಂದ ಸೋಲುವ ಪಂದ್ಯದಲ್ಲೂ ಜಯಭೇರಿ ಬಾರಿಸುತ್ತಿದ್ದು ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಈ ಹಿಂದಿನ ಎರಡು ಪಂದ್ಯಗಳಲ್ಲಿ ಹೈದರಾಬಾದ್ ಮತ್ತು ರಾಜಸ್ಥಾನ್‌ಗೆ ಶರಣಾಗಿದ್ದ ಮುಂಬೈ ಪ್ಲೇ ಆಫ್ ರೇಸ್‌ನಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದೆ. ಇನ್ನುಳಿದ ಪಂದ್ಯಗಳಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳದಿದ್ದರೆ ಮುಂಬೈಯ ಹಾದಿ ದುರ್ಗಮವಾಗಲಿದೆ. ಮುಂಬೈ ಇಷ್ಟರವರೆಗೆ ಆರು ಪಂದ್ಯಗಳನ್ನಾಡಿದ್ದು ಕೇವಲ ಒಂದರಲ್ಲಿ ಜಯ ಕಂಡಿದೆ. ಇದೇ ವೇಳೆ ಧೋನಿ ನಾಯಕತ್ವದ ಚೆನ್ನೈ ಆರು ಪಂದ್ಯಗಳಲ್ಲಿ ಐದರಲ್ಲಿ ಜಯಭೇರಿ ಬಾರಿಸಿ ಅಗ್ರಸ್ಥಾನದಲ್ಲಿದೆ. ಕಾವೇರಿ ಸಮಸ್ಯೆಯಿಂದಾಗಿ ಚೆನ್ನೈಯಲ್ಲಿ ಪ್ರತಿಭಟನೆ ನಡೆದ ಕಾರಣ ಪಂದ್ಯಗಳನ್ನು ಪುಣೆಗೆ ವರ್ಗಾಯಿಸಿದರೂ ಚೆನ್ನೈಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ ಜಯ ಸಾಧಿಸಿದೆ. ಅದೇ ಮುಂಬೈಗೆ ರೇಸ್‌ನಲ್ಲಿ ಉಳಿಯಬೇಕಾದರೆ ಗೆಲುವು ಅನಿವಾರ್ಯವಾಗಿದೆ.
Related Articles
ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ತಂಡದ ಇತರೆಲ್ಲ ಆಟಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ನಾಯಕ ರೋಹಿತ್, ಪೋಲಾರ್ಡ್ ಆಡಿದ ಐದು ಪಂದ್ಯಗಳಲ್ಲಿ ಮಿಂಚಲಿಲ್ಲ. ಒಂದು ವೇಳೆ ರೋಹಿತ್, ಪೋಲಾರ್ಡ್, ಸೂರ್ಯ, ಎವಿನ್ ಹಾರ್ದಿಕ್ ಸಿಡಿದರೆ ಮುಂಬೈ ಯಾವುದೇ ಸ್ಥಿತಿಯಲ್ಲೂ ಪಂದ್ಯವನ್ನು ಗೆಲ್ಲಬಹುದು.
Advertisement
ಚೆನ್ನೈ ಪ್ರಚಂಡ ಫಾರ್ಮ್ಧೋನಿ ಅವರ ಸ್ಫೋಟಕ ಆಟದಿಂದಾಗಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಚೆನ್ನೈ ಪ್ರಚಂಡ ನಿರ್ವಹಣೆ ನೀಡುತ್ತಿದೆ. ನಾಯಕ ಧೋನಿ ಸಹಿತ ಶೇನ್ ವಾಟ್ಸನ್, ರಾಯುಡು, ಬ್ರಾವೊ ಉತ್ತಮ ಫಾರ್ಮ್ನಲ್ಲಿದ್ದಾರೆ. ಸುರೇಶ್ ರೈನಾ ಮಾತ್ರ ಉತ್ತಮ ನಿರ್ವಹಣೆ ನೀಡಲು ಒದ್ದಾಡುತ್ತಿದ್ದಾರೆ. ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವ ಈ ಪಿಚ್‌ನಲ್ಲಿ ಆಟಗಾರರು ಮತೊ¾ಮ್ಮೆ ಪ್ರಚಂಡ ಆಟ ಆಡುವ ವಿಶ್ವಾಸವಿದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಚೆನ್ನೈಯ ಬೌಲಿಂಗ್ ಕೂಡ ಉತ್ತಮ ಮಟ್ಟದಲ್ಲಿದೆ. ಶಾದೂìಲ್ ಠಾಕುರ್, ಇಮ್ರಾನ್ ತಾಹಿರ್, ದೀಪಕ್ ಚಹರ್ ಮಿಂಚುತ್ತಿದ್ದಾರೆ.