Advertisement

CSK V/s SRH: ಚೆನ್ನೈ ಗೆಲುವಿನ ಉತ್ಸಾಹಕ್ಕೆ ಸ್ಟೋಕ್ಸ್‌  ಬಲ

12:58 AM Apr 21, 2023 | Team Udayavani |

ಚೆನ್ನೈ: ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಶುಕ್ರವಾರದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಸ್ಟೋಕ್ಸ್‌ ಸೇರ್ಪಡೆಯ ಬಲದಿಂದ ಚೆನ್ನೈ ಗೆಲುವಿನ ಉತ್ಸಾಹದಲ್ಲಿದೆ.

Advertisement

ಕಾಲ್ಬೆ ರಳು ಗಾಯದಿಂದ ಬಳಲುತ್ತಿದ್ದ ಸ್ಟೋಕ್ಸ್‌ ಕಳೆದ ಮೂರು ಐಪಿಎಲ್‌ ಪಂದ್ಯಗಳಲ್ಲಿ ಆಡಿರಲಿಲ್ಲ. ಫಿಟ್‌ನೆಸ್‌ಗೆ ಮರಳಿದ ಬಳಿಕ ಅವರು ಬುಧವಾರ ನೆಟ್‌ ಅಭ್ಯಾಸ ನಡೆಸಿದ್ದು ಆಯ್ಕೆಗೆ ಲಭ್ಯವಿರುವುದನ್ನು ಖಚಿತಪಡಿಸಿದ್ದಾರೆ.

ಸ್ಟೋಕ್ಸ್‌ ಆಗಮನದಿಂದ ಚೆನ್ನೈಯ ಬ್ಯಾಟಿಂಗ್‌ ಶಕ್ತಿಗೆ ಇನ್ನಷ್ಟು ಬಲ ಬಂದಿದೆ. ತವರಿನಲ್ಲಿಯೇ ಈ ಪಂದ್ಯ ನಡೆಯುವ ಕಾರಣ ಆಟಗಾರರೆಲ್ಲರೂ ಸಿಡಿಯುವ ಸಾಧ್ಯತೆಯಿದೆ. ಆರ್‌ಸಿಬಿ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿಯೂ ಚೆನ್ನೈ ಬೃಹತ್‌ ಮೊತ್ತ ಪೇರಿಸಿತ್ತು. ಆದರೆ ಆರ್‌ಸಿಬಿ ಸ್ಫೋಟಕವಾಗಿ ಆಡಿದ್ದರೂ ಅಂತಿಮವಾಗಿ ಅಲ್ಪ ಮೊತ್ತದಿಂದ ಸೋತಿತ್ತು. ಇದೇ ವೇಳೆ ಚೆನ್ನೈಯ ಎದುರಾಳಿ ಹೈದರಾಬಾದ್‌ ಈ ಹಿಂದಿನ ಪಂದ್ಯದಲ್ಲಿ ಮುಂಬೈಗೆ ಶರಣಾಗಿತ್ತು.

ಬ್ಯಾಟಿಂಗ್‌ ಬಲಿಷ್ಠ
ಚೆನ್ನೈಯ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಸ್ಟೋಕ್ಸ್‌ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ. ಅಗ್ರ ಕ್ರಮಾಂಕದಲ್ಲಿ ಡೇವನ್‌ ಕಾನ್ವೇ, ರುತುರಾಜ್‌ ಗಾಯಕ್ವಾಡ್‌ ಭರ್ಜರಿ ಆರಂಭ ಒದಗಿಸಿದ್ದರೆ ಹಿಟ್ಟರ್‌ ಶಿವಂ ದುಬೆ, ಅಜಿಂಕ್ಯ ರಹಾನೆ, ಧೋನಿ ಮತ್ತು ರವೀಂದ್ರ ಜಡೇಜ ಬಿರುಸಿನ ಬ್ಯಾಟಿಂಗ್‌ ನಡೆಸಲು ಸಮರ್ಥರಿದ್ದಾರೆ. ಚೆನ್ನೈಯ ಬೌಲರ್‌ಗಳ ನಿರ್ವಹಣೆ ಸ್ಥಿರವಾಗಿಲ್ಲ ಮತ್ತು ಫೀಲ್ಡಿಂಗ್‌ ನಿರೀಕ್ಷಿತ ಮಟ್ಟದಲ್ಲಿ ಇರದಿರುವುದು ಚಿಂತೆಯ ವಿಷಯವಾಗಿದೆ.

ಇನ್ನೊಂದು ಕಡೆ ಹೈದರಾಬಾದ್‌ ಕೂಡ ತನ್ನ ಬ್ಯಾಟಿಂಗ್‌ ಶಕ್ತಿಯನ್ನು ನಂಬಿಕೊಂಡಿದೆ. ನಾಯಕ ಐಡೆನ್‌ ಮಾರ್ಕ್‌ ರಮ್‌ ಸಹಿತ ಅಗ್ರ ಆಟಗಾರರು ಬ್ಯಾಟಿಂಗ್‌ನಲ್ಲಿ ಮಿಂಚಿ ದರೆ ಹೈದರಾಬಾದ್‌ ತಂಡ ಚೆನ್ನೈಯನ್ನು ಮಣಿಸುವ ಸಾಧ್ಯತೆಯಿದೆ. ಸ್ಫೋಟಕ ಖ್ಯಾತಿಯ ಹ್ಯಾರಿ ಬ್ರೂಕ್‌, ರಾಹುಲ್‌ ತ್ರಿಪಾಠಿ, ಗ್ಲೆನ್‌ ಫಿಲಿಪ್ಸ್‌, ಅಭಿಷೇಕ್‌ ಶರ್ಮ ಅವರಿಂದ ಉತ್ತಮ ಬ್ಯಾಟಿಂಗ್‌ ನಿರೀಕ್ಷಿಸಲಾಗಿದೆ.

Advertisement

ಈ ಹಿಂದಿನ ಪಂದ್ಯದಲ್ಲಿ ಪವರ್‌ಪ್ಲೇಯಲ್ಲಿ ಕೆಲವು ವಿಕೆಟ್‌ ಕಳೆದುಕೊಂಡಿರುವುದು ತಂಡಕ್ಕೆ ಹಿನ್ನೆಡೆ ಯಾಗಿತ್ತು. ಮಧ್ಯಮ ಕ್ರಮಾಂಕದ ಆಟಗಾರರು ಆಳವಾದ ಬ್ಯಾಟಿಂಗ್‌ ಪ್ರದರ್ಶಿಸಿ ಪಂದ್ಯವನ್ನು ಜಯದ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸುವ ಅಗತ್ಯವಿದೆ ಎಂದು ತಂಡದ ಮುಖ್ಯ ಕೋಚ್‌ ಬ್ರ್ಯಾನ್‌ ಲಾರಾ ಹೇಳಿದ್ದಾರೆ.
ಸ್ಥಳೀಯ ಹೀರೋ ವಾಷಿಂಗ್ಟನ್‌ ಸುಂದರ್‌ ತವರು ಮೈದಾನದಲ್ಲಿ ಮಿಂಚು ಹರಿಸುವ ಉತ್ಸಾಹದಲ್ಲಿದ್ದಾರೆ. ಅವರ ಈ ಉತ್ಸಾಹಕ್ಕೆ ತಂಡದ ಇತರ ಆಟಗಾರರೆಲ್ಲರೂ ಬೆಂಬಲವಾಗಿ ನಿಂತರೆ ಹೈದರಾಬಾದ್‌ ಗೆಲುವಿನ ಸಂಭ್ರಮವನ್ನು ನಿರೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next