Advertisement

ತಮಿಳುನಾಡು ಸರ್ಕಾರಕ್ಕೆ 450 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ದೇಣಿಗೆ ನೀಡಿದ ಸಿಎಸ್ ಕೆ

07:48 AM May 09, 2021 | Team Udayavani |

ಚೆನ್ನೈ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಾಯವಾಗುವ ನಿಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತಮಿಳುನಾಡು ಸರ್ಕಾರ  450 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ನೀಡಿದೆ.

Advertisement

ಸಿಎಸ್ ಕೆ ತಂಡ ನಿರ್ದೇಶಕ ಆರ್. ಶ್ರೀನಿವಾಸನ್ ಅವರು ಶುಕ್ರವಾರ ಈ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಹಸ್ತಾಂತರಿಸಿದರು. ಈ ಸಮಯದಲ್ಲಿ ತಮಿಳುನಾಡು ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೂಪಾ ಗುರುನಾಥ್ ಉಪಸ್ಥಿತರಿದ್ದರು.

ಕೋವಿಡ್ ರಿಲೀಫ್ ಕಾರ್ಯಗಳನ್ನು ಮಾಡುತ್ತಿರುವ ಭೂಮಿಕಾ ಟ್ರಸ್ಟ್ ಜೊತೆ ಕೈ ಜೋಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಕಾರ್ಯ ಮಾಡುತ್ತಿದೆ. ಮೊದಲ ಹಂತದ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ನೀಡಿದ್ದು, ಉಳಿದವು ಇನ್ನೊಂದು ವಾರದಲ್ಲಿ ಸರ್ಕಾರಕ್ಕೆ ನೀಡಲಿದೆ.

ಸಿಎಸ್ ಕೆ ತಂಡದಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದವು. ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಮತ್ತು ಬೌಲಿಂಗ್ ಕೋಚ್ ಬಾಲಾಜಿ ಗೆ ಕೋವಿಡ್ ಪಾಸಿಟಿವ್ ದೃಢವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next