Advertisement

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

11:13 PM May 18, 2021 | Team Udayavani |

ಜೊಹಾನ್ಸ್‌ಬರ್ಗ್‌ : ದಕ್ಷಿಣ ಆಫ್ರಿಕಾದ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ ಅವರ ನಿವೃತ್ತಿ ಪಕ್ಕಾ ಆಗಿದೆ. ಅವರು ನಿವೃತ್ತಿಯಿಂದ ಹೊರಬಂದು ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡುವ ಯಾವುದೇ ಸಾಧ್ಯತೆ ಇಲ್ಲ ಎಂಬುದಾಗಿ “ಕ್ರಿಕೆಟ್‌ ಸೌತ್‌ ಆಫ್ರಿಕಾ’ (ಸಿಎ) ಸ್ಪಷ್ಟಪಡಿಸಿದೆ.

Advertisement

ಮುಂಬರುವ ವೆಸ್ಟ್‌ ಇಂಡೀಸ್‌ ಮತ್ತು ಐರ್ಲೆಂಡ್‌ ಪ್ರವಾಸಕ್ಕೆಂದು ಸೀಮಿತ ಓವರ್‌ಗಳ ತಂಡಗಳನ್ನು ಪ್ರಕಟಿಸುವ ವೇಳೆ ಸಿಎ ಇದನ್ನು ಖಚಿತಪಡಿಸಿದೆ.

2018ರಲ್ಲಿ ವಿದಾಯ
38 ವರ್ಷದ ಎಬಿಡಿ ಸರಿಯಾಗಿ 3 ವರ್ಷಗಳ ಹಿಂದೆ (ಮೇ 2018) ಕ್ರಿಕೆಟಿಗೆ ಗುಡ್‌ಬೈ ಹೇಳಿದ್ದರು. ಆದರೆ ಅವರು ನಿವೃತ್ತಿಯಿಂದ ಹೊರಬಂದು ಟಿ20 ಕ್ರಿಕೆಟ್‌ ಆಡಲಿದ್ದಾರೆ, ಟಿ20 ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕೆಂಬ ಬಯಕೆ ಅವರಲ್ಲಿದೆ ಎಂಬ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಲೇ ಇತ್ತು. ಸ್ವತಃ ಎಬಿಡಿ ಕೂಡ ಇಂಥದೊಂದು ಅಭಿಲಾಷೆ ವ್ಯಕ್ತಪಡಿಸಿದ್ದಾಗಿಯೂ, ಐಪಿಎಲ್‌ ಮುಗಿದ ಬಳಿಕ ಮಂಡಳಿ ಯನ್ನು ಸಂಪರ್ಕಿಸುವಂತೆ ಅವರಿಗೆ ಸೂಚಿಸಿದ್ದಾಗಿಯೂ ವರದಿ ಯಾಗಿತ್ತು. ಆದರೆ ಇದಕ್ಕೆಲ್ಲ ಈಗ ಪೂರ್ಣ ವಿರಾಮ ಬಿದ್ದಿದೆ.

“ನಾವು ಎಬಿಡಿ ಜತೆ ಎಲ್ಲ ಮಾತುಕತೆ ಮುಗಿಸಿದ್ದೇವೆ. ಒಮ್ಮೆ ಅವರು ಕೈಗೊಂಡ ನಿವೃತ್ತಿ ನಿರ್ಧಾರವೇ ಅಂತಿ ಮವಾಗಿರುತ್ತದೆ’ ಎಂದು ತಂಡ ಗಳನ್ನು ಪ್ರಕಟಿಸುವ ವೇಳೆ ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟಪಡಿಸಿದೆ.

ಎರಡು ಹೊಸ ಮುಖಗಳು
ದಕ್ಷಿಣ ಆಫ್ರಿಕಾ ಪ್ರಕಟಿಸಿದ ಟೆಸ್ಟ್‌ ತಂಡದಲ್ಲಿ ಇಬ್ಬರು ಹೊಸಬರಿದ್ದಾರೆ. ಇವರೆಂದರೆ ಬಲಗೈ ಆಫ್‌ ಸ್ಪಿನ್ನರ್‌ ಪ್ರನೀಲನ್‌ ಸುಬ್ರಾಯನ್‌ ಮತ್ತು ಬಲಗೈ ಪೇಸ್‌ ಬೌಲರ್‌ ಲಿಝಾಡ್‌ ವಿಲಿಯಮ್ಸ್‌.

Advertisement

ವೆಸ್ಟ್‌ ಇಂಡೀಸ್‌ ಎದುರಿನ ಟೆಸ್ಟ್‌ ತಂಡಕ್ಕೆ ಡೀನ್‌ ಎಲ್ಗರ್‌, ಟಿ20 ತಂಡಕ್ಕೆ ಟೆಂಬ ಬವುಮ ನಾಯಕರಾಗಿದ್ದಾರೆ. ಇತ್ತಂಡಗಳ ನಡುವೆ 2 ಟೆಸ್ಟ್‌, 5 ಟಿ20 ಪಂದ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next