Advertisement
ಈ ಕುರಿತು ಮರಳು ಕುರಿತ 7 ಸದಸ್ಯರ ಸಮಿತಿಯ ಅಧ್ಯಕ್ಷರಾಗಿರುವ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ. ಈ ಮೊದಲು ಜಿಲ್ಲೆಯ ಸಿಆರ್‌ಝಡ್ ವಲಯದಲ್ಲಿ ಗುರುತಿಸಲಾದ 14 ಮರಳು ದಿಬ್ಬಗಳನ್ನು ತೆರವುಗೊಳಿ ಸಲು ಮಾರ್ಚ್ 5ರಂದು ಎನ್‌ಒಸಿ ನೀಡಲಾಗಿದ್ದು ಅದರ ಅವಧಿ 2023ರ ಮಾರ್ಚ್ 4ರ ವರೆಗೆ ಇದೆ. ಮರಳು ದಿಬ್ಬಗಳನ್ನು ಮಾನವ ಶ್ರಮದಿಂದ ತೆರವುಗೊಳಿಸಲು 11.01. 2022ರಲ್ಲಿ ಸರಕಾರ ನೀಡಿರುವ ಮಾರ್ಗಸೂಚಿಗನುಸಾರ ತಾತ್ಕಾಲಿಕ ಪರವಾನಿಗೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿತ್ತು. ಸ್ವೀಕೃತ 282 ಅರ್ಜಿ ಬಂದಿದ್ದು, 148 ಮಂದಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿತ್ತು.
ಜಿಲ್ಲೆಗೆ ಸಂಬಂಧಿಸಿದ್ದು, ಪ್ರಸ್ತುತ ಹೈಕೋರ್ಟ್ ಆದೇಶ ಪಾಲನೆ ಮಾಡದಿ ದ್ದರೆ ನ್ಯಾಯಾಲಯ ನಿಂದನೆಯಾಗುವ ಸಂಭವವಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೋಟಿಸ್ ಗಳನ್ನು ಕೋರ್ಟ್ ವಜಾಗೊಳಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಮೀನುಗಾರಿಕೆ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಮರಳು ದಿಬ್ಬ ಗಳನ್ನು ತೆರವುಗೊಳಿಸಲು ಅನುಮತಿ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.