Advertisement

ಕ್ರಿಪ್ಟೋಕರೆನ್ಸಿ ನಿಷೇಧ: ಹೈಕೋರ್ಟ್‌ನಲ್ಲಿ ಅರ್ಜಿ

06:00 AM Apr 23, 2018 | Team Udayavani |

ನವದೆಹಲಿ: ಬ್ಯಾಂಕ್‌ಗಳು ಕ್ರಿಪ್ಟೋಕರೆನ್ಸಿ ವಹಿವಾಟು ಸೇವೆ ನಡೆಸುವುದನ್ನು ನಿಷೇಧಿಸಿ ಆರ್‌ಬಿಐ ಇತ್ತೀಚೆಗೆ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ದೂರು ಸಲ್ಲಿಸಲಾಗಿದೆ. ಪ್ರಕರಣವನ್ನು ಪರಿಗಣಿಸಿದ ಹೈಕೋರ್ಟ್‌, ಕೇಂದ್ರ ಸರ್ಕಾರ, ಆರ್‌ಬಿಐ ಹಾಗೂ ಜಿಎಸ್‌ಟಿ ಕೌನ್ಸಿಲ್‌ ಪ್ರತಿಕ್ರಿಯೆಯನ್ನು ಕೇಳಿದೆ. ಅಷ್ಟೇ ಅಲ್ಲ, ಹಣಕಾಸು ಸಚಿವಾಲಯಕ್ಕೂ ಈ ಸಂಬಂಧ ನೋಟಿಸ್‌ ನೀಡಲಾಗಿದ್ದು, ಮೇ 24ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಗುಜರಾತ್‌ ಮೂಲದ ಕಲಿ ಡಿಜಿಟಲ್‌ ಎಕೋಸಿಸ್ಟಮ್ಸ್‌ ಪ್ರೈ ಲಿ ಈ ದೂರು ದಾಖಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next