Advertisement

ತಾಯಂದಿರ ದಿನದ ಸ್ಥಾಪಕಿಯ ಅಳಲು

09:58 AM Nov 08, 2019 | mahesh |

ಪ್ರತಿ ವರ್ಷ ಮೇ 10ರಂದು ತಾಯಂದಿರ ದಿನವೆಂದು ಆಚರಿಸಲಾಗುತ್ತದೆ. ಆ ಪರಿಪಾಠವನ್ನು ಶುರುಮಾಡಿದ್ದು ಆ್ಯನ್ನಾ ಜಾರ್ವಿಸ್‌ ಎಂಬ ಮಹಿಳೆ. ಅಮೆರಿಕ ಪ್ರಜೆಯಾದ ಆ್ಯನ್ನಾ ಅಲ್ಲಿ ಸಮಾಜಸೇವಕಿಯಾಗಿ ಹೆಸರು ಮಾಡಿದಾಕೆ. ಅಲ್ಲದೆ ಅನ್ಯಾಯದ ವಿರುದ್ಧ ಪ್ರತಿಭಟನೆಗಳಲ್ಲೂ ಪಾಲ್ಗೊಳ್ಳುತ್ತಿದ್ದವಳು. ಅವರ ತಾಯಿಗೆ ಒಟ್ಟು 11 ಮಂದಿ ಮಕ್ಕಳು. ಅವರು 1905ರಲ್ಲಿ ತೀರಿಕೊಂಡರು. ಆ ಸಮಯದಲ್ಲಿಯೇ ಆ್ಯನ್ನಾ ಅವರಿಗೆ ತಮ್ಮ ತಾಯಿ ತೀರಿಕೊಂಡ ದಿನವನ್ನು ಅವರ ನೆನಪಿನಲ್ಲಿ “ತಾಯಂದಿರ ದಿನ’ವನ್ನಾಗಿ ಆಚರಿಸಬೇಕೆಂಬ ಯೋಚನೆ ಮೊಳೆತಿದ್ದು. ಅಲ್ಲಿಂದ ಮುಂದೆ ಸಿವಿಲ್‌ ಯುದ್ಧದಲ್ಲಿ ಮಡಿದ ಸೈನಿಕರ ತಾಯಂದಿರ ದಿನ ಎಂದು ಆಚರಿಸುವ ಬಗ್ಗೆ ಪ್ರಚಾರ ಮಾಡಿದಾಗಲೇ “ತಾಯಂದಿರ ದಿನ’ದ ಬಗ್ಗೆ ಸುದ್ದಿ ಹಬ್ಬಿದ್ದು. ನಂತರ 1914ರ ಸಮಯದಲ್ಲಾಗಲೇ ಮೇ 10ರಂದು ಅಮೆರಿಕವಾಸಿಗಳು ತಾಯಂದಿರ ಹಬ್ಬವನ್ನು ಆಚರಿಸಲು ಶುರುಮಾಡಿದ್ದರು.

Advertisement

ಬಹಳ ಬೇಗ ತಾಯಂದಿರ ದಿನ ಜನರ ನಡುವೆ ಪ್ರಚಾರ ಪಡೆಯಿತು. ಮಾರುಕಟ್ಟೆಯಲ್ಲಿ ಚಾಕಲೇಟ್‌ ಸಂಸ್ಥೆಗಳು, ಗ್ರೀಟಿಂಗ್ಸ್‌ ಮುಂತಾದ ಉಡುಗೊರೆ ತಯಾರಕ ಕಂಪನಿಗಳು ಈ ದಿನವನ್ನು ಚೆನ್ನಾಗಿಯೇ ಬಳಸಿಕೊಂಡವು. ಈ ಕಂಪನಿಗಳು ಚೆನ್ನಾಗಿ ಲಾಭ ಮಾಡಿಕೊಂಡವು. ಅದರಿಂದ ಪ್ರೇರಣೆ ಪಡೆದ ಇನ್ನಷ್ಟು ಸಂಸ್ಥೆಗಳು ಬೆಳೆದು ತಾಯಂದಿರ ದಿನವೆಂದರೆ ಲಾಭದಾಯಕ ಎನ್ನುವಂಥ ವಾತಾವರಣ ಸೃಷ್ಟಿಯಾಯಿತು. ಇದನ್ನು ಆ್ಯನ್ನಾ ನಿರೀಕ್ಷಿಸಿರಲಿಲ್ಲ. “ತಾಯಂದಿರ ದಿನ’ದ ಹಿಂದಿನ ನಿಜವಾದ ಉದ್ದೇಶವೇ ಮರೆಮಾಚಿದಂತಾಗಿ ಜನರನ್ನು ಕೊಳ್ಳುಬಾಕ ಸಂಸ್ಕೃತಿ ಆವರಿಸಿಕೊಳ್ಳುತ್ತಿರುವುದನ್ನು ಕಂಡು ಅವರಿಗೆ ಬೇಸರವಾಯಿತು. ಹೀಗಾಗಿ “ತಾಯಂದಿರ ದಿನ’ವನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದರು. ತಾಯಂದಿರ ದಿನವನ್ನು ಶುರುಮಾಡಿದಾಕೆಯೇ ಅದನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದ್ದು ಅಚ್ಚರಿಯ ಸಂಗತಿಯೇ ಸರಿ!

ಹವನ

Advertisement

Udayavani is now on Telegram. Click here to join our channel and stay updated with the latest news.

Next