Advertisement
ಮೊಹಮ್ಮದ್ ಅಮೀನ್ ಎನ್ನುವ ಪಾಕ್ ನಿವಾಸಿ, ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿ ಕೊಂಡಿದ್ದು, ಆರ್ಥಿಕ ಸಂಕಷ್ಟ ದಿಂದಾಗಿ 5ನೇ ತರಗತಿ ಓದುತ್ತಿರುವ ತನ್ನ ಮಗಳು ನಾದಿಯಾಳನ್ನು ಶಾಲೆ ಬಿಡಿಸಿ, ಆಕೆಯ ತಾಯಿಯೊಂದಿಗೆ ಮನೆಗೆಲಸಕ್ಕೆ ಕಳು ಹಿಸುತ್ತಿರುವುದಾಗಿ ಹೇಳಿಕೊಂಡಿ ದ್ದಾರೆ. ಪರಿಸ್ಥಿತಿ ಮುಂದು ವರಿದರೆ 13 ವರ್ಷದ ತಮ್ಮ ಇನ್ನೊಬ್ಬ ಮಗಳನ್ನೂ ಶಾಲೆ ಬಿಡಿಸ ಬೇಕಾದ ಪರಿಸ್ಥಿತಿ ಬರಬಹುದು ಎಂದು ಕಣ್ಣೀರಿಟ್ಟಿದ್ದಾರೆ. ಪಾಕಿಸ್ತಾನದ ಹಲವು ಪೋಷಕರ ಸ್ಥಿತಿಯೂ ಇದುವೇ ಆಗಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ ಸಾಲ ಪಡೆಯಲು ವಿಧಿಸಿರುವ ಷರತ್ತಿನಂತೆ ತೆರಿಗೆ ಸಂಗ್ರಹ ಹೆಚ್ಚಿಸಲು ಮುಂದಾಗಿರುವ ಪಾಕ್, ಐಶಾರಾಮಿ ವಸ್ತುಗಳು ಹಾಗೂ ಸೇವಾ ಸರಕುಗಳ ಆಮದಿನ ಮೇಲಿನ ತೆರಿಗೆ ಶುಲ್ಕವನ್ನು ಶೇ.17 ರಿಂದ ಶೇ.25ಕ್ಕೆ ಏರಿಕೆ ಮಾಡಿದೆ.