ಬೆಂಗಳೂರು: ಜೆ.ಪಿ.ನಗರದ ಶಾಕಾಂಬರಿ ಬಡಾವಣೆಯಲ್ಲಿ ಯುವಕನೊಬ್ಬ ಆಸ್ತಿಗಾಗಿ ತನ್ನ ತಂದೆಯ ಕಣ್ಣನ್ನೇ ಕಿತ್ತು ಹಾಕಿ ರಾಕ್ಷಸೀ ಕೃತ್ಯ ಎಸಗಿದ್ದಾನೆ.
65 ರ ಹರೆಯದ ನಿವೃತ್ತ ಸರ್ಕಾರಿ ನೌಕರ ಪರಮೇಶ್ ಅವರ ಕಣ್ಣನ್ನು ಪುತ್ರ ಚೇತನ್ ಕೈ ಬೆರಳುಗಳನ್ನು ಬಳಸಿಕೊಂಡು ಕಿತ್ತು ಹಾಕಿದ್ದಾನೆ.
ಅಟ್ಟಹಾಸ ಮೆರೆದ ಬಳಿಕ ಪಲಾಯನಗೈಯಲು ಚೇತನ್ ಯತ್ನಿಸಿದ್ದು , ಬೊಬ್ಬೆ ಕೇಳಿದ ನೆರೆ ಕೆರೆಯವರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.
ಪರಮೇಶ್ ಅವರ ಒಂದು ಕಣ್ಣು ಗುಡ್ಡೆ ಕಿತ್ತು ಹೋಗಿದ್ದು ,ಇನ್ನೊಂದು ಸಂಪೂರ್ಣವಾಗಿ ಗಾಯಗೊಂಡಿದ್ದು ಜೆ.ಪಿ.ನರಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಚೇತನ್ ಡ್ರಗ್ಸ್ ವ್ಯಸನಿಯಾಗಿದ್ದು ಹಣ ಪೋಲು ಮಾಡುತ್ತಾನೆ ಎನ್ನುವ ಕಾರಣಕ್ಕೆ ಆತನಿಗೆ ಆಸ್ತಿ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.