Advertisement

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ ಆದರೆ…

01:12 AM Dec 12, 2022 | |

ಉಕ್ರೇನ್‌ ವಿರುದ್ಧ ರಷ್ಯಾ ದಾಳಿ ಮುಂದುವರಿಸಿರುವಂತೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 76 ಡಾಲರ್‌ ವರೆಗೆ ಇಳಿಕೆಯಾಗಿದೆ. ಇದರ ಜತೆಗೆ ಜಗತ್ತಿಗೆ ಮತ್ತೆ ಆರ್ಥಿಕ ಹಿಂಜರಿತ ಕಾಡಲಿದೆ ಎಂಬ ಭೀತಿಯ ನಡುವೆಯೇ ಈ ಬೆಳವಣಿಗೆಯಾಗಿದೆ. ಇದರಿಂದಾಗಿ ಸಾರ್ವಜನಿಕರು ಖರೀದಿಸುವ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯಾಗಲಿದೆಯೇ ಎಂಬ ಸಂಶಯವೂ ಜನರನ್ನು ಕಾಡುತ್ತಿದೆ.

Advertisement

ಕಚ್ಚಾ ತೈಲ ಬೇಡಿಕೆಗೆ ಆತಂಕ
ಆರ್ಥಿಕ ಹಿಂಜರಿತದ ಆತಂಕದ ನಡುವೆ ಕಚ್ಚಾ ತೈಲಕ್ಕೆ ಬೇಡಿಕೆ ಇಳಿಕೆ
ಹಲವು ರಾಷ್ಟ್ರಗಳಲ್ಲಿ ಮತ್ತಷ್ಟು ಬಡ್ಡಿ ದರ ಏರಿಕೆ ಆತಂಕ
ಚೀನ ಅರ್ಥ ವ್ಯವಸ್ಥೆ ಬೆಳವಣಿಗೆ
ಪ್ರತಿಭಟನೆಯ ನಡುವೆಯೇ ನಿರ್ಬಂಧ ವಾಪಸ್‌ ಪಡೆಯುತ್ತಿರುವಂತೆಯೇ ಸೋಂಕು ಹೆಚ್ಚುವ ಆತಂಕ. ಇದರಿಂದಾಗಿ ಅರ್ಥ ವ್ಯವಸ್ಥೆಗೆ ಆತಂಕ

ತೈಲ ಪೂರೈಕೆ ಆತಂಕ ಇಳಿಕೆ
ರಷ್ಯಾದ ಕಚ್ಚಾ ತೈಲ ಉತ್ಪಾದನೆ ಸದ್ಯ ಕೊರೊನಾ ಪೂರ್ವ ಸ್ಥಿತಿಗೆ ವಾಪಸು
ಪ್ರತೀ ಬ್ಯಾರೆಲ್‌ಗೆ 60 ಡಾಲರ್‌ ಎಂದು ಜಿ7 ರಾಷ್ಟ್ರಗಳ ಒಕ್ಕೂಟ ನಿಗದಿ ಮಾಡಿರುವುದೂ ಪ್ರತಿಕೂಲ ಆಗುವ ಸಾಧ್ಯತೆ ಕಡಿಮೆ.

ದೇಶದಲ್ಲಿ ಬೆಲೆ ಇಳಿಕೆ ಅನುಮಾನ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯ ಅನ್ವಯ ನಮ್ಮ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಳಿಕೆ ಆಗುತ್ತದೆ.
ಎಪ್ರಿಲ್‌ನಿಂದ ಈಚೆಗೆ ಬೆಲೆ ಏರಿಕೆಯನ್ನು ತಡೆ ಹಿಡಿಯಲಾಗಿದೆ.

ಪರೋಕ್ಷ ಅನುಕೂಲಗಳು
ಕಚ್ಚಾ ತೈಲ ಆಮದು ಮೊತ್ತವನ್ನು ಇಳಿಕೆ ಮಾಡಲಿವೆ.
ಹಣದುಬ್ಬರ ಪ್ರಮಾಣ ಇಳಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next