Advertisement
ಸಿಆರ್‌ಪಿಎಫ್ ಯೋಧರೊಬ್ಬರು ನೀಡಿರುವ ಸಲಹೆಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೀನಿಯರ್ ಮತ್ತು ಜೂನಿಯರ್ ಸಿಬಂದಿ ನಡುವೆ ಆಗಾಗ ಮನಸ್ತಾಪಗಳಾಗುತ್ತವೆ. ಪರಸ್ಪರ ಗೌರವದ ಕೊರತೆ, ವಾಗ್ವಾದಗಳು, ಜಗಳ, ಕೊಲೆ, ಆತ್ಮಹತ್ಯೆ ಪ್ರಕರಣಗಳು ಪಡೆಯ ವರ್ಚಸ್ಸಿಗೂ ಧಕ್ಕೆ ತರುತ್ತಿವೆ. ಹೀಗಾಗಿ ಸಿಬಂದಿ ನಡುವೆ ಗೌರವ ಬೆಳೆಸುವಂಥ ಕಾರ್ಯಕ್ರಮ ಕೈಗೊಂಡರೆ ಉತ್ತಮ ಎಂಬ ಸಲಹೆ ನೀಡಲಾಗಿತ್ತು.
Related Articles
ಯೋಗಾಭ್ಯಾಸವು ಹೇಗೆ ನಮ್ಮ ಶರೀರವನ್ನು ಫಿಟ್ ಆಗಿಸುತ್ತದೋ, ಅದೇ ಮಾದರಿಯಲ್ಲಿ ಸಂಸ್ಕಾರವು ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ. ಹೀಗಾಗಿ ಎಲ್ಲ ಘಟಕಗಳು, ವಲಯಗಳು ಹಾಗೂ ಬೆಟಾ
ಲಿಯನ್‌ಗಳು “ಸಂಸ್ಕಾರ ಶಾಲೆ’ಯನ್ನು ಆರಂಭಿಸ ಬೇಕು. ಇಲ್ಲಿ ಹಿರಿಯರು ಮತ್ತು ಕಿರಿಯರು ಉತ್ತಮ ನೈತಿಕ ಮೌಲ್ಯಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಆಗಾಗ್ಗೆ ಅನೌಪಚಾರಿಕ ಗೆಟ್ ಟುಗೆದರ್ ನಡೆಸಬೇಕು. ಒಳ್ಳೆಯ ವಿಚಾರಗಳನ್ನು ವಿನಿಮಯ ಮಾಡಿ ಸಿಬಂದಿಯ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Advertisement