Advertisement
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಳಿ ಗಾಗಿ ಮಿಲಿಟರಿಯ ಒಂದು ಭಾಗ ವಾಗಿ ರುವ ಸಿಆರ್‌ಪಿಎಫ್ನ್ನು ಬಳಸಿ ಕೊಂಡಿ ರುವುದು ಆ ಸಿಬಂದಿಗೆ ಮಾಡಿದ ಅವಮಾನವಾಗಿದೆ. ಸಿಆರ್‌ಪಿಎಫ್ ಸಿಬಂದಿ ಯನ್ನು ಬಳಸಿಕೊಂಡು ದಾಳಿ ಮಾಡಲು ಸಚಿವರೇನು ಉಗ್ರ ಗಾಮಿಯೇ ಎಂದು ಜನಾರ್ದನ ಪೂಜಾರಿ ಪ್ರಶ್ನಿಸಿದರು.
ಈ ದಾಳಿ ದುರುದ್ದೇಶದಿಂದಲೇ ಕೂಡಿದೆ ಎಂದ ಅವರು, ಇಂದು ಡಿಕೆಶಿ ಯವರ ಮನೆ ಮೇಲೆ, ನಾಳೆ ಪೂಜಾರಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆಯೂ ದಾಳಿ ಮಾಡಿಸು ತ್ತಾರೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಯಾರೂ ಪ್ರಶ್ನಿಸು ವಂತೆಯೇ ಇಲ್ಲವೇ ಎಂದರು.
Related Articles
Advertisement
ಹೋರಾಟಕ್ಕೆ ಬೆಂಬಲಕಾವ್ಯಾ ನಿಗೂಢ ಸಾವಿನ ಕುರಿತಂತೆ ಆಕೆಯ ತಾಯಿಯೇ ಎಲ್ಲ ಉತ್ತರ ನೀಡಿದ್ದಾರೆ. ನಾನು ಮಾತನಾಡಿದರೆ ಜಾತಿ ರಾಜಕಾರಣ ಆರೋಪ ಬರ ಬಹುದು. ಆದರೂ ನ್ಯಾಯಕ್ಕಾಗಿ ನಡೆ ಯುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸುದ್ದಿ ಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಕಾವ್ಯಾ ಸಾವಿನ ಕುರಿತಂತೆ ತನ್ನ ಶಿಷ್ಯ ಉಗ್ರಪ್ಪನವರು ತಮ್ಮ ಮಾತು ಗಳ ಮೂಲಕ ತನ್ನ ತಾಕತ್ತನ್ನು ತೋರಿ ಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಲ್ಲ ರೀತಿಯ ತನಿಖೆಗೆ ಮುಂದಾಗಬೇಕು ಎಂದರು.