Advertisement

ಮಾವೋ ಉಗ್ರರೊಂದಿಗಿನ ಗುಂಡಿನ ಕಾಳಗ: CRPF ಅಧಿಕಾರಿ ಬಲಿ

11:22 AM Apr 21, 2018 | Team Udayavani |

ರಾಯಪುರ: ಛತ್ತೀಸ್‌ಗಢದ ಸುಕ್‌ಮಾ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ  ಮಾವೋ ವಾದಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸಿಆರ್‌ಪಿಎಫ್ ನ ಓರ್ವ ಅಧಿಕಾರಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ನಿನ್ನೆ ಶುಕ್ರವಾರ ಮಧ್ಯರಾತ್ರಿಯ ವೇಳೆಗೆ ಕಿಸ್ತಗ್ರಾಮ್‌ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿನ ಅರಣ್ಯ ಪ್ರದೇಶದಲ್ಲಿ  ಮಾವೋವಾದಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಅನಿಲ್‌ ಕುಮಾರ್‌ ಮೌರ್ಯ ಅವರು ಉಗ್ರರ ಗುಂಡಿಗೆ ಬಲಿಯಾದರು.

ಮೃತ ಮೌರ್ಯ ಅವರು ಮಧ್ಯ ಪ್ರದೇಶದವರು ಎಂದು ಘಟನೆಯ ವಿವರ ನೀಡಿರುವ ಡಿಐಜಿ ಸುಂದರರಾಜ್‌ ಪಿ ತಿಳಿಸಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next