ಹೊಸದಿಲ್ಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶುಕ್ರವಾರ ದೆಹಲಿಯ ತುಘಲಕ್ ರಸ್ತೆ ಪ್ರದೇಶದಲ್ಲಿನ ಗುಪ್ತಚರ ಇಲಾಖೆ (ಐಬಿ) ನಿರ್ದೇಶಕರ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ 53 ವರ್ಷ ಪ್ರಾಯದ ಸಿಆರ್‌ಪಿಎಫ್ ಜವಾನ ರಾಜ್’ಬೀರ್ ಕುಮಾರ್ ತನ್ನ ಸರ್ವೀಸ್ ರೈಫಲ್ ಎಕೆ-47 ನಿಂದ ಎರಡು ಸುತ್ತು ಗುಂಡು ಹಾರಿಸಿಕೊಂಡಿದ್ದಾರೆ.
ಕುಮಾರ್ ಕಳೆದ ಕೆಲ ದಿನಗಳಿಂದ ರಜೆಯಲ್ಲಿದ್ದು ಶುಕ್ರವಾರ ಕರ್ತವ್ಯಕ್ಕೆ ಮರಳಿದ್ದರು. ಅವರಿಗೆ ಐಬಿ ನಿರ್ದೇಶಕರ ನಿವಾಸದಲ್ಲಿ ಅವರ ಪೋಸ್ಟಿಂಗ್ ಆಗಿತ್ತು.
ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಸಂತ್ರಸ್ತೆಯ ಕುಟುಂಬಕ್ಕೆ ತಿಳಿಸಲಾಗಿದ್ದು, ಸಿಆರ್ ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ವಿಚಾರಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.