Advertisement

Chhattisgarh: ನಕ್ಸಲರಿಂದ ಐಇಡಿ ಸ್ಫೋಟ… ಚುನಾವಣಾ ಕರ್ತವ್ಯದಲ್ಲಿದ್ದ ಯೋಧನಿಗೆ ಗಾಯ

10:28 AM Nov 07, 2023 | sudhir |

ಛತ್ತೀಸ್‌ಗಢ: ರಾಜ್ಯದಲ್ಲಿ ಮತದಾನ ಆರಂಭವಾದ ಬೆನ್ನಲ್ಲೇ ನಕ್ಸಲರು ನಡೆಸಿದ ಸುಧಾರಿತ ಸ್ಫೋಟದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಯೋಧನೋರ್ವ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

Advertisement

ಗಾಯಗೊಂಡಿರುವ ಯೋಧನನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದ್ದು, ಪ್ರಥಮ ಚಿಕಿತ್ಸೆ ಪಡೆದು ಸದ್ಯ ಸುರಕ್ಷಿತವಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ಮಾಹಿತಿ ನೀಡಿದೆ.

ಸುಕ್ಮಾದ ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ಚವಾಣ್ ನೀಡಿರುವ ಮಾಹಿತಿಯಂತೆ ಗಾಯಗೊಂಡಿರುವ ಯೋಧ ಕೋಬ್ರಾ ಬೆಟಾಲಿಯನ್‌ನವರಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಹೇಳಿದ್ದಾರೆ.

ಕೋಬ್ರಾ ಪಡೆ ಮತ್ತು ಸಿಆರ್ ಪಿಎಫ್ ಸಿಬ್ಬಂದಿ ಕ್ಯಾಂಪ್ ತೊಂಡಮಾರ್ಕಾದಿಂದ ಎಲ್ಮಗುಂದ ಗ್ರಾಮಕ್ಕೆ ಪ್ರದೇಶದಲ್ಲಿ ಕಾರ್ಯಾಚರಣೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗಸ್ತು ತಿರುಗುತ್ತಿದ್ದಾಗ ಜವಾನ ನಕ್ಸಲರು ಅಳವಡಿಸಿದ್ದ ಐಇಡಿಯನ್ನು ತುಳಿದು ಸ್ಪೋಟಗೊಂಡ ಪರಿಣಾಮ ಯೋಧನ ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.

ಎರಡನೇ ಘಟನೆ:
ಎರಡು ದಿನಗಳಲ್ಲಿ ಛತ್ತೀಸ್‌ಗಢದಲ್ಲಿ ನಡೆದ ಎರಡನೇ ಐಇಡಿ ಸ್ಫೋಟ ಇದಾಗಿದ್ದು, ಸೋಮವಾರ, ಕಂಕೇರ್‌ನಲ್ಲಿ ಐಇಡಿ ಸ್ಫೋಟಗೊಂಡು ಬಿಎಸ್‌ಎಫ್ ಕಾನ್‌ಸ್ಟೆಬಲ್ ಮತ್ತು ಇಬ್ಬರು ಮತದಾನ ತಂಡದ ಸದಸ್ಯರು ಗಾಯಗೊಂಡಿದ್ದರು. ಗಾಯಗೊಂಡ ಕಾನ್ಸ್‌ಟೇಬಲ್‌ನನ್ನು ಪ್ರಕಾಶ್ ಚಂದ್ ಎಂದು ಗುರುತಿಸಲಾಗಿದ್ದು, ಆತನಿಗೆ ಕಾಲುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಛೋಟೆಪೇಥಿಯಾಗೆ ರವಾನಿಸಲಾಗಿದೆ.

Advertisement

ಛತ್ತೀಸ್‌ಗಢದಲ್ಲಿ ನಕ್ಸಲ್ ಪೀಡಿತ ಬಸ್ತಾರ್ ಕ್ಷೇತ್ರ ಸೇರಿದಂತೆ 20 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಸುಗಮ ಮತದಾನವನ್ನು ಖಚಿತಪಡಿಸಿಕೊಳ್ಳಲು, 20 ಕ್ಷೇತ್ರಗಳ ಸೂಕ್ಷ್ಮ ಪ್ರದೇಶಗಳಲ್ಲಿನ 600 ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ.

90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ ಎರಡನೇ ಹಂತದ ಮತದಾನ ನವೆಂಬರ್ 17 ರಂದು ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: Assembly Elections: ಛತ್ತೀಸ್‌ಗಢ, ಮಿಜೋರಾಂನಲ್ಲಿ ಮತದಾನ ಆರಂಭ, ಬಿಗಿ ಭದ್ರತೆ

Advertisement

Udayavani is now on Telegram. Click here to join our channel and stay updated with the latest news.

Next