Advertisement

ಅನಂತನಾಗ್‌ನಲ್ಲಿ ಉಗ್ರರ ದಾಳಿ: ಓರ್ವ ಸಿಆರ್‌ಪಿಎಫ್ ಜವಾನ ಹುತಾತ್ಮ

11:57 AM Jul 13, 2018 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಗೆ ಓರ್ವ ಸಿಆರ್‌ಪಿಎಫ್ ಜವಾನ ಹುತಾತ್ಮನಾಗಿ ಇನ್ನಿಬ್ಬರು ಗಾಯಗೊಂಡರೆಂದು ಸೇನಾ ಮೂಲಗಳು ತಿಳಿಸಿವೆ. 

Advertisement

ಅನಂತನಾಗ್‌ ಜಿಲ್ಲೆಯ ಅಚಬಾಲ್‌ ಚೌಕ್‌ ನಲ್ಲಿ ಕಾನೂನು ಮತ್ತು ಶಿಸ್ತನ್ನು ಕಾಪಿಡುವ ಸಲುವಾಗಿ ಸಿಆರ್‌ಪಿಎಫ್ ತಂಡವೊಂದನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ತಂಡದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಮೂವರು ಜವಾನರು ಗಾಯಗೊಂಡರು. ಇವರಲ್ಲಿ ಒಬ್ಬ ಜವಾನ ಅಸುನೀಗಿದರು ಎಂದು ಸೇನಾ ವಕ್ತಾರ ತಿಳಿಸಿದ್ದಾರೆ. 

ಉಗ್ರರ ದಾಳಿಯನ್ನು ಅನುಸರಿಸಿ ಈಗ ಇಡಿಯ ಪ್ರದೇಶವನ್ನು ಸುತ್ತುವರಿಯಲಾಗಿದ್ದು ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next