ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಚೆರ್ಸೂ ಬಳಿ ಗುಂಡಿನ ಸದ್ದು ಕೇಳಿದ ಕೆಲವೇ ಹೊತ್ತಿನ ಬಳಿಕ ಕೇಂದ್ರೀಯ ಮೀಸಲು ಪೋಲೀಸ್ ಪಡೆ (CRPF) ಯೋಧನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ.
ಮೃತರನ್ನು ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ.
ಅವಂತಿಪೋರಾ ಪೊಲೀಸರ ಪ್ರಕಾರ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವಾಗಿದ್ದು ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ ಎಂದು ಹೇಳಿದ್ದಾರೆ.
ಅವಂತಿಪೋರಾದ ಚೆರ್ಸೂ ಗ್ರಾಮದ ಬಳಿ ಶುಕ್ರವಾರ ಮಧ್ಯ ರಾತ್ರಿ ಸುಮಾರು 1.55 ರ ವೇಳೆಗೆ ಗುಂಡಿನ ಸದ್ದು ಕೇಳಿದೆ ಇದರ ಆಧಾರದಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಅಜಯ್ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ ಜೊತೆಗೆ ಅವರು ಬಳಸುತ್ತಿದ್ದ ರೈಫಲ್ ಕೂಡ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Instagram ಪೋಸ್ಟ್ ನಿಂದ ವಿರಾಟ್ ಕೊಹ್ಲಿ 11.45 ಕೋಟಿ ರೂ ಪಡೆಯುವುದು ನಿಜವೇ? ಅಸಲೀಯತ್ತೇನು