Advertisement

ಶ್ರೀನಗರ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಕನ್ನಡಿಗ ಯೋಧ ಹುತಾತ್ಮ 

02:37 PM Apr 04, 2017 | Team Udayavani |

ಬೆಳಗಾವಿ: ಶ್ರೀನಗರದ ಪಂಥಾ ಚೌಕ್‌ನಲ್ಲಿ  ಸೋಮವಾರ ನಡೆದ ಉಗ್ರರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ  ಬೆಳಗಾವಿಯ ಸಿಆರ್‌ಪಿಎಫ್ ಹೆಡ್‌ ಕಾನ್ಸ್‌ಟೇಬಲ್‌ ಚಿಕಿತ್ಸೆ ಫ‌ಲಕಾರಿಯಾಗದೆ ಹುತಾತ್ಮರಾಗಿದ್ದಾರೆ.  

Advertisement

ಕಿತ್ತೂರಿನ ಬೈಲೂರಿನ ಬಸಪ್ಪ ಹನುಮಂತಪ್ಪ ಭಜಂತ್ರಿ(50) ಹುತಾತ್ಮ ಯೋಧ. ಭಜಂತ್ರಿ ಅವರು ಕಳೆದ 18 ವರ್ಷಗಳಿಂದ ಸಿಆರ್‌ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 

ಜಮ್ಮುವಿನಿಂದ ಶ್ರೀನಗರಕ್ಕೆ  ಬರುತ್ತಿದ್ದ ಸಿಆರ್‌ಪಿಎಫ್ ಯೋಧರ ವಾಹನವನ್ನು ಗುರಿಯಾಗಿರಿಸಿಕೊಂಡು ಉಗ್ರರು ಭಾರೀ ದಾಳಿ ನಡೆಸಿದ್ದರು. ದಾಳಿಯಲ್ಲಿ ಭಜಂತ್ರಿ ಸೇರಿದಂತೆ 6 ಮಂದಿ ಯೋಧರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. 

ಭಜಂತ್ರಿ ಅವರ ಪಾರ್ಥೀವ ಶರೀರ ಇಂದು ಸ್ವಗೃಹಕ್ಕೆ ತರಲಾಗುತ್ತಿದೆ. ಶ್ರೀನಗರದಿಂದ ಪಣಜಿಗೆ ವಿಮಾನ ಮೂಲಕ ತಂದು ಬಳಿಕ ರಸ್ತೆ ಮಾರ್ಗದ ಮೂಲಕ ಮನೆಗೆ ತರಲಾಗುತ್ತಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next