Advertisement

ತರಕಾರಿ ಖರೀದಿಗೆ ಜನಜಂಗುಳಿ

02:49 PM Apr 05, 2020 | Suhan S |

ಗದಗ: ಲಾಕ್‌ಡೌನ್‌ ಘೋಷಣೆಯಾಗಿ 11ನೇ ದಿನವಾದ ಶನಿವಾರವೂ ನಗರ ಸೇರಿದಂತೆ ಜಿಲ್ಲೆ ಬಹುತೇಕ ಸ್ತಬ್ಧವಾಗಿತ್ತು.ಕಳೆದ ಮೂರು ದಿನಗಳಿಂದ ನಿರಂತರವಾಗಿ ನಗರದಲ್ಲಿ ಜಿಲ್ಲಾ ನ್ಯಾಯಾಧಿಧೀಶರು ಪರ್ಯಟನೆ ನಡೆಸುತ್ತಿದ್ದಾರೆ. ಆದರೂ ಎಪಿಎಂಸಿಯಲ್ಲಿ ತರಕಾರಿ, ಸಗಟು ಖರೀದಿ ವೇಳೆ ಜನಜಂಗುಳಿ ತಪ್ಪಿಲ್ಲ.

Advertisement

ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಗೊಂಡಾಗಿನಿಂದ ವಾಹನಗಳ ಸಂಚಾರ ತಡೆ ಹಾಗೂ ದಿನಸಿ, ತರಕಾರಿ ಖರೀದಿಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಪೊಲೀಸರು ಪ್ರತಿನಿತ್ಯ ಹರಸಾಹಸ ನಡೆಸುತ್ತಿದ್ದರು. ಈ ನಡುವೆ ಬೈಕ್‌ಗಳನ್ನು ವಶಕ್ಕೆ ಪಡೆದು ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿದ್ದರೂ, ತರಕಾರಿ ಹಾಗೂ ದಿನಸಿ ಖರೀದಿಯಲ್ಲಿ ಸಾಮಾಜಿಕ ಅಂತರ ಕಂಡು ಬರಲಿಲ್ಲ.

ಇದೇ ವೇಳೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಧೀಶರಾದ ಜಿ.ಎಸ್‌. ಸಂಗ್ರೇಶಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ. ಸಲಗೆರೆ ಅವರು ಮಾರುಕಟ್ಟೆಗೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಜನರನ್ನು ಚದುರಿಸಿದರು. ಬಳಿಕ ಸ್ಥಳಕ್ಕೆ ಬಂದ ನ್ಯಾಯಾಧಿಧೀಶರು, ಮಾರುಕಟ್ಟೆಯಲ್ಲಿ ಸೇರಿದ್ದ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್ 19 ದಿಂದ ಮುಕ್ತರಾಗಬೇಕು ಎಂದು ತಿಳಿ ಹೇಳಿದರು.

ಮೇವು ವಿತರಣೆ: ಕರ್ನಾಟಕ ಪ್ರಜಾಪರ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಸೇವಾ ಸಂಘದ ಕಾರ್ಯಕರ್ತರು ಅವಳಿ ನಗರದ ವಿವಿಧೆಡೆ ಇರುವ ಬಿಡಾಡಿ ದನಗಳಿಗೆ ಮೇವಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದರು. ಸಂಘದ ಪದಾ ಧಿಕಾರಿಗಳು ಒಂದು ಟಿಪ್ಪರ್‌ ಒಣ ಮೇವನ್ನು ಪಂಚಾಕ್ಷರಿ ನಗರ, ಕುರಹಟ್ಟಿ ಪೇಟೆ, ಶಹಪುರ ಪೇಟೆ,ಬೆಟಗೇರಿ ಬಸ್‌ ನಿಲ್ದಾಣ, ಡಿ.ಸಿ. ಮಿಲ್‌, ಖಾನತೋಟ, ಸೇರಿದಂತೆ ಮುಳಗುಂದ ದೋಬಿಘಾಟ್‌ ಸಮೀಪದ ವೆಂಕಟೇಶ್ವರ ಪ್ರೌಢಶಾಲೆ ಬಳಿ ನಿಂತಿದ್ದ ಜಾನುವಾರುಗಳಿಗೆ ಹಾಕಿದರು.

ಉಚಿತ ಹಾಲು ವಿತರಣೆ: ಕಾರ್ಮಿಕ, ಪಶು ಸಂಗೋಪನೆ ಇಲಾಖೆಗಳ ಹಾಗೂ ಧಾರವಾಡದ ಕರ್ನಾಟಕ ಹಾಲು ಒಕ್ಕೂಟ ಮಂಡಳಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಇಲ್ಲಿನ ಬಾಪೂಜಿ ನಗರದ ಬಡ ಕುಟುಂಬಗಳಿಗೆ ತಲಾ ಅರ್ಧ ಲೀಟರ್‌ ಹಾಲು ವಿತರಿಸಲಾಯಿತು.

Advertisement

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬಡಾವಣೆಯ ಮನೆ ಮನೆಗೆ ತೆರಳಿ ಹಾಲು ವಿತರಿಸಿದರು. ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಜಟ್ಟೆಣ್ಣವರ, ಕೆ.ಎಂ. ಎಫ್‌ ಅಧಿ ಕಾರಿ ನೋಡಲ್‌ ಅಧಿಕಾರಿ ಜಿ. ಯಲ್ಲಪ್ಪ ಇದ್ದರು.

ಫಾಗಿಂಗ್‌: ನಗರಸಭೆ ಮಾಜಿ ಸದಸ್ಯ ಎಂ.ಸಿ. ಶೇಖ್‌ ನೇತೃತ್ವದಲ್ಲಿ ವಾರ್ಡ್‌ ನಂ. 33ರ ವ್ಯಾಪ್ತಿಯ ಬಾಪೂಜಿ ನಗರ, ಹುಬ್ಬಳ್ಳಿ ರಸ್ತೆಯ ವಿವಿಧ ಬಡಾವಣೆಗಳಲ್ಲಿ ಕೊರೊನಾ ವೈರಸ್‌ ಹಾಗೂ ಸೊಳ್ಳೆಗಳು ಹರಡದಂತೆ ಫಾಗಿಂಗ್‌ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next