Advertisement

Udupi ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ದಂಡು

11:27 PM Jun 22, 2024 | Team Udayavani |

ಮಲ್ಪೆ: ವಾರಾಂತ್ಯದ ರಜೆ ಮತ್ತು ಮಳೆ ಬಿಡುವು ನೀಡಿದ ಕಾರಣ ಶನಿವಾರ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

Advertisement

ಶನಿವಾರ ಬೆಳಗ್ಗಿನಿಂದಲೇ ಬೀಚ್‌ ಕಡೆಗೆ ಪ್ರವಾಸಿಗರ ವಾಹನಗಳು ಅಗಮಿಸುತ್ತಿದ್ದವು. ಮಳೆಗಾಲದಲ್ಲಿ ಕಡಲತೀರದ ಸೊಬಗು ಹೆಚ್ಚಾಗಿದ್ದು, ಕಡಲ ಅಲೆಯನ್ನು ಕಂಡ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಲು ಮುಂದಾಗುತ್ತಾರೆ. ಮಳೆಗಾಲದಲ್ಲಿ ಇಲ್ಲಿನ ಸಮುದ್ರಕ್ಕೆ ಇಳಿಯಲು ನಿರ್ಬಂಧ ಹೇರಿದ್ದರಿಂದ ನಿರಾಸೆಗೊಂಡು ಹಿಂದಿರುಗುತ್ತಿದ್ದಾರೆ.

ಪ್ರವಾಸಿಗರನ್ನು ನಿಯಂತ್ರಿಸಲು ಮಲ್ಪೆ ಬೀಚ್‌ನಲ್ಲಿ ಹೆಚ್ಚಿನ ಸಿಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು, ಜೀವರಕ್ಷಕರು, ಹೋಮ್‌ಗಾರ್ಡ್‌ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next