Advertisement
ನೌಕೆ ವೀಕ್ಷಣೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನಸಾಗರ ಹರಿದು ಬಂದಿತ್ತು. ಬೆಳಗಿನಿಂದಲೇ ನೇವಿಯ ಅರಗಾ ಮುಖ್ಯದ್ವಾರದ ಬಳಿ ಜನ ಜಮಾಯಿಸಿದ್ದರು. ರಾಷ್ಟ್ರೀಯ ಹೆದ್ದಾರಿ -66ರಲ್ಲಿ 3 ಕಿ.ಮೀ. ಉದ್ದಕ್ಕೆ ಜನರು ಬೆಳಗಿನ 9 ಗಂಟೆಯಿಂದಲೇ ಯುದ್ಧನೌಕೆ ವಿಕ್ರಮಾದಿತ್ಯ ವೀಕ್ಷಣೆಗೆ ಕಾದಿದ್ದರು. ನೌಕೆ
Related Articles
Advertisement
ಲಘು ರಿಫ್ರೆಶ್ಮೆಂಟ್: ಉರಿ ಬಿಸಿಲಲ್ಲಿ ತಾಸುಗಟ್ಟಲೆ ಕ್ಯೂ (ಸರದಿ ಸಾಲಿನಲ್ಲಿ) ನಿಂತು ಬಸವಳಿದು ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಭೇಟಿಗೆ ಬಂದ ಜನರಿಗೆ ಕದಂಬ ನೌಕಾನೆಲೆ ಆಡಳಿತ ವರ್ಗ ಲಘು ಉಪಾಹಾರದ ವ್ಯವಸ್ಥೆ ಮಾಡಿತ್ತು. ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿತ್ತು.
ಏನಿದೆ ಐಎನ್‌ಎಸ್ : ವಿಕ್ರಮಾದಿತ್ಯದಲ್ಲಿ ಐಎನ್‌ಎಸ್ ವಿಕ್ರಮಾದಿತ್ಯ ಅತೀ ಉದ್ದನೆಯ ಮತ್ತು ಅತೀ ಎತ್ತರದ ಭಾರತದ ಯುದ್ಧ ನೌಕೆ. 63 ಸಾವಿರ ಕೋಟಿ ರೂ. ಮೌಲ್ಯದ ಈ ಯುದ್ಧ ನೌಕೆ ಒಮ್ಮಲೇ ಎರಡು ಮೂರು ಲಘು ಯುದ್ಧ ವಿಮಾನಗಳು, ನಾಲ್ಕು ಹೆಲಿಕಾಪ್ಟರ್ ಹಾಗೂ ನಾಲ್ಕಾರು ಮಿಗ್‌ಗಳು ಲ್ಯಾಂಡಿಂಗ್ ಆಗುವಷ್ಟು ವಿಶಾಲವಾಗಿದೆ. ಯುದ್ಧ ವಿಮಾನಗಳು ಟೇಕ್ ಆಫ್ ಆಗುವಷ್ಟು ರನ್ ವೇ ಹೊಂದಿದೆ. ಅಷ್ಟೊಂದು ಆಧುನಿಕ ಸೌಕರ್ಯಗಳು ಈ ನೌಕೆಯಲ್ಲಿವೆ. ರಷ್ಯಾ ನಿರ್ಮಿತ ಈ ಯುದ್ಧ ನೌಕೆಯನ್ನು ಎನ್ ಡಿಎ ಮೊದಲ ಅವಧಿಯಲ್ಲಿ ದೇಶಕ್ಕೆ ಸಮರ್ಪಣೆ ಮಾಡಲಾಗಿತ್ತು. ಐಎನ್ ಎಸ್ ವಿಕ್ರಮಾದಿತ್ಯ ಯುದ್ಧ ನೌಕೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಗಸ್ತು ತಿರುಗುತ್ತಿರುತ್ತದೆ. ಈ ಬೃಹತ್ ನೌಕೆಯ ಸುತ್ತ ಆರು ಲಘು ಯುದ್ಧ ನೌಕೆಗಳು ಗಸ್ತು (ಕಾವಲು) ಇರುತ್ತವೆ. ಈಚೆಗೆ ಫ್ರಾನ್ಸ್ ಮತ್ತು ಭಾರತದ ಜಂಟಿ ಸಮರಾಭ್ಯಾಸದ ವೇಳೆ ಐಎನ್‌ಎಸ್ ವಿಕ್ರಮಾದಿತ್ಯ ಪ್ರಮುಖ ಪಾತ್ರ ವಹಿಸಿತ್ತು.