Advertisement
ಬೆಂಗಳೂರು ಮತ್ತು ಹೊರಜಿಲ್ಲೆ ಸಾವಿರಾರು ಮಂದಿ ಪ್ರವಾಸಿಗರು ಹೆಚ್ಚಿನ ಆಗಮಿಸಿದ್ದಾರೆ. ಕಳೆದು ಮೂರು ದಿನಗಳಿಂದ ಅಪಾರ ಸಂಖ್ಯೆಯಲ್ಲಿ ಮಲ್ಪೆ ಬೀಚ್ ಮತ್ತು ಸೈಂಟ್‌ಮೇರಿಗೆ ಭೇಟಿ ನೀಡಿದ್ದಾರೆ. ಮತದಾನ ಮಾರನೇಯ ದಿನದಿಂದ ನೂರಾರು ಪ್ರವಾಸಿ ವಾಹನಗಳು ಮಲ್ಪೆ ಕಡೆಗೆ ಅಗಮಿಸುತ್ತಿದ್ದು ಜನದಟ್ಟಣೆ ಕಂಡು ಬರುತ್ತಿತ್ತು. ಶನಿವಾರ ಮತ್ತು ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ಇದರಿಂದಾಗಿ ಪಾರ್ಕಿಂಗ್ ಏರಿಯಾಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿತ್ತು.
ಸಾಲು ರಜೆಯ ಹಿನ್ನಲೆಯಲ್ಲಿ ಕೆಲವೊಂದು ಪ್ರಮುಖ ಧಾರ್ಮಿಕ ಕೇಂದ್ರ, ಪ್ರವಾಸಿತಾಣಗಳ ನಗರಗಳಲ್ಲಿ ವಸತಿ ಗೃಹಗಳ ಸಮಸ್ಯೆ ಎದುರಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಕುಟುಂಬ ಸಮೇತರಾಗಿ ಜನರು ಬಂದಿರುವುದರಿಂದ ವಸತಿ ಗೃಹಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕೆಲವರು ತಿಂಗಳ ಮೊದಲೇ ವಸತಿಗೃಹ, ರೆಸಾರ್ಟ್‌ಗಳಲ್ಲಿ ಕೊಠಡಿಯನ್ನು ಕಾಯ್ದಿರಿಸಿಕೊಂಡಿದ್ದರೆ ಕೆಲವರಿಗೆ ರೂಮಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಪಾರ್ಕಿಂಗ್ ಸಮಸ್ಯೆ
ಮಲ್ಪೆ ಬೀಚ್‌ನಲ್ಲಿ ಪ್ರತೀ ರವಿವಾರ ಪಾರ್ಕಿಂಗ್ ಸಮಸ್ಯೆ ಎದುರಾಗುವುದು ಸಾಮಾನ್ಯ. ಇದೀಗ ಮೂರು ದಿನಗಳಿಂದ ಇಲ್ಲಿಗೆ ಆಗಮಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿ ವಾಹನ ಸವಾರರು ವಾಹನ ಪಾರ್ಕ್ ಮಾಡಲು ಪರದಾಡುತ್ತಿದ್ದಾರೆ. ಬೀಚ್‌ನ ದಕ್ಷಿಣ ಭಾಗದ ಇಂಟರ್‌ಲಾಕ್ ರಸ್ತೆಯ ಸಿಕ್ಕ ಸಿಕ್ಕಲ್ಲಿ ಪಾರ್ಕ್ ಮಾಡಲಾಗುತ್ತಿದ್ದು, ವಾಹನ ತೆರವಿಗೂ ಸಮಸ್ಯೆಯಾಗುತ್ತಿದೆ.