Advertisement

ಪಾಕ್‌ ಶೆಲ್‌ ದಾಳಿ: ಎಲ್‌ಓಸಿ ಗಡಿ ಸಾಪ್ತಾಹಿಕ ವಾಣಿಜ್ಯ ವಹಿವಾಟು ಸ್ಥಗಿತ

08:59 AM Apr 03, 2019 | Team Udayavani |

ಜಮ್ಮು : ಜಮ್ಮು ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ಭಾರತೀಯ ಸೇನೆಯ ಹೊರ ಠಾಣೆಗಳನ್ನು ಗುರಿ ಇರಿಸಿ ಭಾರೀ ಶೆಲ್‌ ದಾಳಿ ನಡೆಸುತ್ತಿರುವ ಕಾರಣ ಪೂಂಚ್‌ – ರವಳಕೋಟ್‌ ಮಾರ್ಗವಾಗಿ ಸಾಗುವ ಗಡಿ-ನಿಯಂತ್ರಣ-ರೇಖೆಯ ಸಾಪ್ತಾಹಿಕ ವಾಣಿಜ್ಯ ವ್ಯವಹಾರಗಳನ್ನು ಇಂದು ಮಂಗಳವಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪೂಂಚ್‌ ಜಿಲ್ಲೆಯ ವಿವಿಧ ವಲಯಗಳಲ್ಲಿ ಪಾಕ್‌ ಪಡೆಗಳು ಭಾರತೀಯ ಸೇನೆಯ ಠಾಣೆಗಳನ್ನು ಮತ್ತು ಗ್ರಾಮಗಳನ್ನು ಗುರಿ ಇರಿಸಿ ನಿನ್ನೆ ಸೋಮವಾರದಿಂದೀಚೆಗೆ ನಡೆಸಿರುವ ಭಾರೀ ಶೆಲ್‌ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಅಧಿಕಾರಿ, ಓರ್ವ ಮಹಿಳೆ ಮತ್ತು ಓರ್ವ ಐದರ ಹರೆಯದ ಬಾಲಕಿ ಮೃತಪಟ್ಟಿದ್ದಾರೆ; ಐವರು ಭದ್ರತಾ ಸಿಬಂದಿಗಳು ಸೇರಿದಂತೆ 24 ಮಂದಿ ಗಾಯಗೊಂಡಿದ್ದಾರೆ.

ಎಲ್‌ಓಸಿ ಗಡಿ ರೇಖೆಯ ಆಚೆ-ಈಚೆಯ ಸಾಪ್ತಾಹಿಕ ವಾಣಿಜ್ಯ ವ್ಯವಹಾರವನ್ನು ಪಾಕ್‌ ಶೆಲ್‌ ದಾಳಿ ಪ್ರಯುಕ್ತ ಇಂದು ಮಂಗಳವಾರ ಅಮಾನತುಗೊಳಿಸಲಾಗಿದೆ ಎಂದು ಪೂಂಚ್‌ ಎಲ್‌ಓಸಿ ಟ್ರೇಡ್‌ ಕಸ್ಟೋಡಿಯನ್‌ ಫ‌ರೀದ್‌ ಕೊಹ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next