Advertisement
ತಲ್ಲೂರು: ಕೃಷಿಯೊಂದಿಗೆ ಜಾನುವಾರುಗಳನ್ನು ಹೆಚ್ಚಾಗಿ ಸಾಕುತ್ತಿದ್ದ ನೇರಳಕಟ್ಟೆ, ಗುಲ್ವಾಡಿ, ಮಾವಿನಕಟ್ಟೆ ಭಾಗದ ಕೃಷಿಕರಿಗೆ ಹೈನುಗಾರಿಕೆಯ ಬಗ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕರ್ಕುಂಜೆ ಹಾಲು ಉತ್ಪಾದಕರ ಸಂಘ ಸ್ಥಾಪನೆಯಾಯಿತು.
ಆರಂಭದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಹೈನುಗಾರರಿಂದ ಮಾತ್ರ ಆರಂಭಗೊಂಡ ಈ ಸಂಸ್ಥೆಯು ಈಗ ಸದಸ್ಯರ ಸಂಖ್ಯೆ 100 ಕ್ಕೂ ಹೆಚ್ಚಿದೆ. ಈ ಭಾಗದ ಜನರ ಆರ್ಥಿಕ ಅಭಿವೃದ್ಧಿಯಲ್ಲಿ ಈ ಸಂಘದ ಪಾತ್ರ ಮಹತ್ತರವಾಗಿದೆ. ಈ ಹಾಲಿನ ಡೈರಿಗೆ ಹಾಲು ಹಾಕಿ ತಮ್ಮ ಸಂಸಾರದ ಹೊಣೆಯನ್ನು ನಿರ್ವಹಿಸುವವರು ಅನೇಕ ಮಂದಿ ಇದ್ದಾರೆ. ಆರಂಭಗೊಂಡ ಉದ್ದೇಶ
ಅವಿಭಜಿತ ದ.ಕ. ಜಿಲ್ಲೆಯ ಗ್ರಾಮೀಣ ಭಾಗದ ರೈತರಿಗೆ ಆರ್ಥಿಕವಾಗಿ ಚೈತನ್ಯ ತುಂಬಲು ಆರಂಭವಾದ ಸಂಸ್ಥೆ ಕೆನರಾ ಮಿಲ್ಕ್ ಯೂನಿಯನ್ (ಕೆಮುಲ್). 1985 ರಲ್ಲಿ ಕೆ.ಕೆ. ಪೈ ಅಧ್ಯಕ್ಷತೆಯಲ್ಲಿ ದ.ಕ. ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ಕೆಮುಲ್ ವಿಲೀನಗೊಂಡಿತು. ಅದೇ ವರ್ಷ ನೇರಳಕಟ್ಟೆಯಲ್ಲಿ ಕರ್ಕುಂಜೆ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಆರಂಭಗೊಂಡಿರುವುದು ವಿಶೇಷ. 80-90 ರ ದಶಕದಲ್ಲಿ ಈ ಭಾಗದ ಹೈನುಗಾರರಿಗೆ ಉತ್ತೇಜನ ನೀಡಲು ಸಂಘ ನೀಡುವ ನಿಟ್ಟಿನಲ್ಲಿ ಶುರುವಾಯಿತು.
Related Articles
2011ರಲ್ಲಿ ನೇರಳಕಟ್ಟೆಯ ನಿಸರ್ಗ ಬಸ್ ನಿಲ್ದಾಣ ಸಮೀಪದ ಹೊಸ ಕಟ್ಟಡಕ್ಕೆ ಈ ಹಾಲು ಉತ್ಪಾದಕರ ಸಂಗ ಸ್ಥಳಾಂತರಗೊಂಡಿತು. ಆ ವರ್ಷದ ಏಪ್ರಿಲ್‌ನಲ್ಲಿ ಕ್ಷಿರಾಬ್ಧಿ ಎನ್ನುವ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
Advertisement
ಪ್ರಸ್ತುತ ಸ್ಥಿತಿಗತಿಈಗ ಇಲ್ಲಿ ಒಟ್ಟು 133 ಸದಸ್ಯರಿದ್ದು, ಅದರಲ್ಲಿ 55 ಮಂದಿ ಹೈನುಗಾರರು ಖಾಯಂ ಆಗಿ ಹಾಲು ಹಾಕುತ್ತಿದ್ದಾರೆ. ದಿನಕ್ಕೆ 380 ರಿಂದ 400 ಲೀ. ಹಾಲು ಸಂಗ್ರಹವಾಗುತ್ತಿದೆ. ಗರಿಷ್ಠ ಸಾಧಕರು
2018 -19 ನೇ ಸಾಲಿನಲ್ಲಿ 1,62,191 ಲೀಟರ್ ಹಾಲು ಸಂಗ್ರಹವಾಗಿದೆ. ಈ ಸಂಘದಲ್ಲಿ ಈ ವರ್ಷದಲ್ಲಿ ಹಾಲು ಹಾಕಿದ ಗರಿಷ್ಠ ಸಾಧಕರ ಪಟ್ಟಿಯಲ್ಲಿ ಶೀನ ಪೂಜಾರಿಯವರಿಗೆ ಅಗ್ರಸ್ಥಾನ. ಅವರು ದಿನಕ್ಕೆ 48 ಲೀಟರ್ ಹಾಲು ಸಂಘಕ್ಕೆ ಹಾಕುತ್ತಿದ್ದಾರೆ. ಗ್ರಾಮೀಣ ಭಾಗದ ಹೈನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ಕುಂಜೆ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಗೊಂಡಿತು. ಈಗಲೂ ಈ ಭಾಗದ ಕೃಷಿಕರಿಗೆ ಬಹಳಷ್ಟು ಪ್ರಯೋಜನವಾಗುತ್ತಿದೆ. ಸಂಘದ ವತಿಯಿಂದ ಈ ಭಾಗದಲ್ಲಿ ಹೈನುಗಾರರನ್ನು ಹೆಚ್ಚಿಸುವ ಗುರಿಯಿದೆ.
-ಕೆ. ಪದ್ಮನಾಭ ಅಡಿಗ, ಅಧ್ಯಕ್ಷರು ಅಧ್ಯಕ್ಷರು:
ಡಾ| ಪ್ರಕಾಶ್ ಶೆಟ್ಟಿ, ಹೆಮ್ಮಕ್ಕಿ ವಿಠಲ ಶೆಟ್ಟಿ, ಸುಂದರ್ ಶೆಟ್ಟಿ ಅಂಪಾರು, ವಿಠಲ ಶೆಟ್ಟಿ ಕರ್ಕುಂಜೆ, ಕೆ. ಪದ್ಮನಾಭ ಅಡಿಗ (ಹಾಲಿ)
ಕಾರ್ಯದರ್ಶಿಗಳು: ಮೊಹಮ್ಮದ್ ನಜೀರ್ ಸಾಹೇಬ್, ಶೇಷಗಿರಿ ನಾಯಕ್ (ಹಾಲಿ)