ಚನ್ನರಾಯಪಟ್ಟಣ: ಪಟ್ಟಣದ ಅಮಾನಿ ಕೆರೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಅಮಾನಿಕೆರೆ ಭೂಮಿ ಕ್ಷೇಮಾಭಿವೃದ್ಧಿ ಸಂಘದಿಂದ ಬಾಗಿನ ಅರ್ಪಿಸಿ ಮಾತ ನಾಡಿದ ಅವರು, ಪಟ್ಟಣದ ಚರಂಡಿ ನೀರು ಕೆರೆಗೆ ಹೋಗದಂತೆ ತಡೆಯ ಲಾಗಿದೆ. ಸಾರ್ವಜನಿಕರ ಉಪಯೋಗ ಕ್ಕಾಗಿ 2 ಸೋಪಾನಕಟ್ಟೆ ನಿರ್ಮಾಣ ಮಾಡಲಾಗುವುದು. ಕೆರೆ ಸ್ವಚ್ಛತೆ ಅಗತ್ಯ ಇರುವ ಎಲ್ಲಾ ಕಾಮಗಾರಿ ಮಾಡಿಸ ಲಾಗುವುದು ಎಂದರು.
ಕೆರೆ ಒತ್ತುವರಿ ತೆರವು: ಯಾವುದೇ ಪ್ರಭಾವಿ ವ್ಯಕ್ತಿಗಳು ಕೆರೆಯನ್ನು ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಗೊಳಿಸಲಾಗುವುದು. ಕೆರೆ ಉಳಿದರೆ ಮಾತ್ರ ನೀರಿನ ಸಮಸ್ಯೆ ಹೋಗಲಾಡಿ ಸಲು ಸಾಧ್ಯವಾಗುತ್ತದೆ. ಜೀವಜಲದ ಸಂಗ್ರಹ ತಾಣವಾಗಿರುವ ಕೆರೆಗಳ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಸ್ಥಳೀಯರ ಸಹ ಕಾರ ಬಹುಮುಖ್ಯ ಎಂದರು.
90 ಕೆರೆಗಳಿಗೆ ಹೇಮಾವತಿ ನೀರು: ಹೇಮಾವತಿ ನಾಲೆ ಮೂಲಕ ಕೆರೆ ತುಂಬಿ ಸುವ ಯೋಜನೆಯಡಿ ತಾಲೂಕಿನ 90 ಕೆರೆಗಳಿಗೆ ನೀರು ಹರಿಸಲಾಗಿದೆ. ನಾಲೆ ನೀರನ್ನು ಉಪಯೋಗಿಸಿ ಕೊಂಡು ಜೋಳ ಹಾಗೂ ರಾಗಿ ಬೆಳೆ ಮಾಡಲು ರೈತರು ಮುಂದಾಗಬೇಕು. ನವಿಲೆ, ಬಾಗೂರು ಏತನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಹರಿ ಸಲಾಗುತ್ತಿದೆ. 2 ದಿನದಲ್ಲಿ ಬಾಗೂರು ಕೆರೆ ಕೋಡಿ ಬೀಳಲಿದೆ. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ತ್ವರಿತವಾಗಿ ಸಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಕಾರ್ಯರಂಭ ಮಾಡಲಿದೆ ಎಂದು ತಿಳಿಸಿದರು.
ಕುರುವಂಕ ಹಾಗೂ ಗೊಲ್ಲರಹೊಸಹಳ್ಳಿ ಗ್ರಾಮದ ಕೆರೆಗೂ ಹೇಮಾವತಿ ಎಡದಂಡೆ ನಾಲೆಯಿಂದ ನೀರು ಹರಿಸಿದ್ದು, ಆ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಸಂತೆಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮದ ಕೆರೆಗಳು ಇದೇ ಮೊದಲ ಬಾರಿಗೆ ತುಂಬಿವೆ ಎಂದರು.
ನೀರಿನ ವಿಷಯದಲ್ಲಿ ರಾಜಕೀಯ ಬೇಡ: ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್ ಗುರೂಜಿ ಮಾತನಾಡಿ, ರೈತರು ಹಾಗೂ ನೀರಾವರಿ ವಿಷಯವಾಗಿ ರಾಜಕೀಯ ಮಾಡದೇ ಉತ್ತಮ ಆಡಳಿತ ನಡೆಸುವ ಶಾಸಕರು ನಮ್ಮಲ್ಲಿದ್ದಾರೆ. ತಾಲೂಕಿನ ಗ್ರಾಮೀಣ ಭಾಗದ ಕರೆಗಳು ತುಂಬಿಸುವ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಮುಂದಾಗಬೇಕು ಎಂದರು.
ತಹಶೀಲ್ದಾರ್ ಜೆ.ಬಿ.ಮಾರುತಿ, ಪುರಸಭೆ ಸಿಒ ಕುಮಾರ್, ಪುರಸಭಾ ಸದಸ್ಯ ಗಣೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಮಹೇಶ್, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಕುಮಾರ್, ಕಾರ್ಯದರ್ಶಿ ನಾಗರಾಜ್ ಹಾಜರಿದ್ದರು.