Advertisement
ನಗರದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಪಂದ್ಯಾಟವನ್ನು ಆಯೋಜಿಸುವ ಉದ್ದೇಶವನ್ನಿಟ್ಟು, ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಸಲುವಾಗಿ ಈ ಹಿಂದೆ ದ.ಕ. ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದ್ದರು. ಅಂದಿನ ಕ್ರೀಡಾ ಸಚಿವರಾಗಿದ್ದ ಅಭಯಚಂದ್ರ ಜೈನ್ ಅವರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕ್ರೀಡಾಂಗಣ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಫುಟ್‌ಬಾಲ್ ಕ್ರೀಡಾಂಗಣಕ್ಕೆ ಹುಲ್ಲು ಹಾಸಿನ ಕಾಮಗಾರಿಗೆಂದು ಲೋಕೋ ಪಯೋಗಿ ಇಲಾಖೆಯು ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆಂದು ಈ ಹಿಂದೆಯೇ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ, ಯಾವುದೇ ಗುತ್ತಿಗೆದಾರರು ಟೆಂಡರ್‌ಗೆ ಅರ್ಜಿ ಹಾಕಿರಲಿಲ್ಲ. ಕಳೆದ ವರ್ಷ ಕರೆದ ಮೂರನೇ ಟೆಂಡರ್‌ನಲ್ಲಿ ಗುತ್ತಿಗೆದಾರರೊಬ್ಬರು ಹೆಚ್ಚುವರಿ 13 ಲಕ್ಷ ರೂ. (ಶೇ. 19ರಷ್ಟು ಹೆಚ್ಚಳ) ನಮೂದಿಸಿ ಟೆಂಡರ್ ಸಲ್ಲಿಸಿದ್ದರು.
Related Articles
ನೆಹರೂ ಮೈದಾನಿನ ಫುಟ್‌ಬಾಲ್ ಕ್ರೀಡಾಂಗಣದ ಹುಲ್ಲುಹಾಸಿಗೆ ಸರಕಾರವು 25 ಲಕ್ಷ ರೂ. ಬಿಡುಗಡೆ ಮಾಡಿದೆ. ಎರಡು ಬಾರಿ ಟೆಂಡರ್ ವಹಿಸಲು ಯಾರೂ ಮುಂದೆ ಬರಲಿಲ್ಲ. ಮೂರನೇ ಬಾರಿ ಶೇ. 19ರಷ್ಟು ಹೆಚ್ಚುವರಿ ಹಣಕ್ಕೆ ಗುತ್ತಿಗೆದಾರರೊಬ್ಬರು ಟೆಂಡರ್ ವಹಿಸಿದ್ದು, ಈ ಮೊತ್ತಕ್ಕೆ ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳುತ್ತದೆ.
– ಪ್ರದೀಪ್ ಡಿ’ಸೋಜಾ,, ಪ್ರಭಾರ ಉಪನಿರ್ದೇಶಕ, ಯುವ ಸಬಲೀಕರಣ,ಕ್ರೀಡಾ ಇಲಾಖೆ
Advertisement
ಯೋಜನೆಯಲ್ಲೇನಿದೆ?ನೂತನ ಯೋಜನೆಯ ಪ್ರಕಾರ ಮೈದಾನಿನಲ್ಲಿ ಟರ್ಫ್ ಅಳವಡಿಸಲಾಗುತ್ತದೆ. ಇದರನ್ವಯ ಕ್ರೀಡಾಂಗಣವನ್ನು ಹುಲ್ಲು ಹಾಸಿನಲ್ಲಿ ಆಕರ್ಷಣೀಯ ಮಾಡಲಾಗುತ್ತದೆ. ರಾತ್ರಿ ವೇಳೆ ಪಂದ್ಯಗಳು ನಡೆಸಲು ಪೆಡ್‌ಲೈಟ್ ಹಾಕಲಾಗುತ್ತದೆ. ಇನ್ನು, ಮಳೆನೀರು ಸರಾಗವಾಗಿ ಹರಿ ಯಲು ಒಳಚರಂಡಿ ವ್ಯವಸ್ಥೆ ಕೂಡ ಈ ಯೋಜನೆಯಲ್ಲೇ ಬರಲಿದೆ. ಬೆಂಗಳೂರಿಗೆ ತೆರಳಿ ಮನವಿ ಮಾಡುತ್ತೇವೆ
ಫುಟ್‌ಬಾಲ್ ಮೈದಾನಕ್ಕೆ ಹುಲ್ಲುಹಾಸು ಅಳವಡಿಸುವ ಯೋಜನೆಗೆ ಹಣ ಬಿಡುಗಡೆಯಾದರೂ, ಯಾವುದೇ ಕೆಲಸಗಳಿನ್ನೂ ಆರಂಭಗೊಳ್ಳಲಿಲ್ಲ. ಈ ಬಗ್ಗೆ ಸದ್ಯದಲ್ಲಿಯೇ ಬೆಂಗಳೂರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಮಾಡ ಲಿ ದ್ದೇವೆ.
- ಡಿ.ಎಂ. ಅಸ್ಲಾಂ, ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ