ಶಿರಸಿ: ಉತ್ತರ ಕನ್ನಡದಲ್ಲಿ ಪೊಲೀಸ್ ಇತಿಹಾಸದಲ್ಲೇ ಮೊದಲ ಬಾರಿಗೆ ನಿಷೇಧಿತ ಕೋಟ್ಯಾಂತರ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ)ನ್ನು ಶಿರಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನಗರದ ಮರಾಠಿ ಕೊಪ್ಪದಲ್ಲಿ ಮಾರಾಟಕ್ಕೆಂದು ಅಂಬರ್ ಗ್ರೀಸ್ ಅಕ್ರಮವಾಗಿಟ್ಟುಕೊಂಡಿದ್ದರು. ಆರೋಪಿಗಳಾದ ಸಂತೋಷ ಬೆಳಗಾವಿ, ಶಿರಸಿಯ ರಾಜೇಶ ಪೂಜಾರಿ ಅವರನ್ನು ಬಂಧಿಸಲಾಗಿದೆ. ಹಾವೇರಿಯ ಅನ್ನಪೂರ್ಣ ತಲೆಮರೆಸಿಕೊಂಡಿದ್ದಾರೆ.
ಅಂಬರ್ ಗ್ರೀಸ್ ಮೌಲ್ಯ ಸುಮಾರು ಐದು ಕೆಜಿಯಷ್ಟು ಇದ್ದು, ಇದರ ಮೌಲ್ಯ ಸುಮಾರು ಐದು ಕೋ.ರೂ.ಆಗಬಹುದು.
ಎಸ್ ಪಿ ಶಿವಪ್ರಕಾಶ್ ದೇವರಾಜ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ರವಿ ಡಿ ನಾಯ್ಕ್ ರವರ ನೇತೃತ್ವದಲ್ಲಿ, ಸಿಪಿಐ ರಾಮಚಂದ್ರ ನಾಯಕ, ಪಿಎಸ್ ಐಗಳಾದ ಭೀಮಾಶಂಕರ್, ಈರಯ್ಯ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಅಂಬರ್ ಗ್ರೀಸ್ ಸುಗಂಧ ದ್ರವ್ಯ, ಔಷಧ ತಯಾರಿಕೆಯಲ್ಲೂ ಬಳಕೆ ಮಾಡುತ್ತಾರೆ ಎಂಬುದು ಉಲ್ಲೇಖನೀಯ.