ಭುವನೇಶ್ವರ: ಹೀರೋ ಇಂಟರ್ ಕಾಂಟಿನೆಂಟಲ್ ಕಪ್ ವಿಜೇತ ಭಾರತದ ಫುಟ್‌ಬಾಲ್ ತಂಡಕ್ಕೆ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಂದು ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಇದೇ ವೇಳೆ ಚಾಂಪಿಯನ್ ತಂಡ 20 ಲಕ್ಷ ರೂ. ಮೊತ್ತವನ್ನು ಬಾಲಾಸೋರ್ ರೈಲು ದುರಂತದ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದೆ.
ರವಿವಾರ ಇಲ್ಲಿನ “ಕಳಿಂಗ ಸ್ಟೇಡಿ ಯಂ’ನಲ್ಲಿ ನಡೆದ ಫೈನಲ್ ಹಣಾ ಹಣಿಯಲ್ಲಿ ಭಾರತ ತಂಡ 2-0 ಗೋಲುಗಳಿಂದ ಲೆಬನಾನ್‌ಗೆ ಸೋಲುಣಿಸಿತ್ತು. ನಾಯಕ ಸುನೀಲ್ ಚೆಟ್ರಿ ಮತ್ತು ಲಾಲಿಯಂಜೂಲ ಚಂಗೆ ಭಾರತದ ಗೋಲುವೀರರಾಗಿದ್ದರು.
“ವಿಜೇತ ಭಾರತ ಫುಟ್‌ಬಾಲ್ ತಂಡಕ್ಕೆ ಅಭಿನಂದನೆಗಳು. ನಮ್ಮ ರಾಜ್ಯದ ಆತಿಥ್ಯದಲ್ಲಿ ನಡೆದ ಪಂದ್ಯಾ ವಳಿ ಇದೆಂಬುದು ಹೆಮ್ಮೆಯ ಸಂಗತಿ. ಒಡಿಶಾದಲ್ಲಿ ಇನ್ನೂ ಹೆಚ್ಚಿನ ಕ್ರೀಡಾಕೂಟಗಳನ್ನು ಆಯೋಜಿ ಸುವುದು, ತನ್ಮೂಲಕ ನಮ್ಮ ರಾಜ್ಯ ಭಾರತದ ಕ್ರೀಡಾ ಪ್ರಗತಿಯಲ್ಲಿ ಹೆಗ್ಗುರುತಾಗಿ ಕಾಣಿಸಿಕೊಳ್ಳುವುದು ನಮ್ಮ ಯೋಜನೆ’ ಎಂಬುದಾಗಿ ಸಮಾ
ರೋಪ ಸಮಾರಂಭದಲ್ಲಿ ನವೀನ್ ಪಟ್ನಾಯಕ್ ಹೇಳಿದರು. ಪಂದ್ಯಾವಳಿ ಯನ್ನು ಯಶಸ್ವಿಯಾಗಿ ಸಂಘಟಿಸಿದ ಒಡಿಶಾ ಸರಕಾರಕ್ಕೆ ಅಖೀಲ ಭಾರತ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ ಕೃತಜ್ಞತೆ ಸಲ್ಲಿಸಿದರು.