Advertisement
ನಗರದ ಜಿಪಂನ ಮಿನಿ ಸಭಾಂಗಣದಲ್ಲಿ ಜಿಪಂ ವತಿಯಿಂದ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಪೂರ್ವ ಸಿದ್ಧತೆಗಳ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ 2019 ರಿಂದ 20ರ ವರೆಗೂ ಜಲ ವರ್ಷದ ಪ್ರಯುಕ್ತ ಜಿಲ್ಲೆಯಲ್ಲಿ ಜಲಾಮೃತ ಕಾರ್ಯಕ್ರಮದಡಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಯೆಂದರು.
Related Articles
Advertisement
500 ಚೆಕ್ ಡ್ಯಾಂಗೆ ಆದ್ಯತೆ: ಪ್ರತಿ ಗ್ರಾಪಂ ಹಾಗೂ ತಾಪಂ ವತಿಯಿಂದ ಸಣ್ಣ ನೀರಾವರಿ ಕೆರೆಗಳು ಕಲ್ಯಾಣಿ, ಪುಷ್ಕರಣಿ, ಕುಂಟೆ, ಕಟ್ಟಡಗಳು ಹಾಗೂ ನಾಲಾ ಬದು, ತಡೆ ಅಣೆಕಟ್ಟು ಮತ್ತು ಕಿಂಡಿ ಅಣೆಕಟ್ಟು ಹಾಗೂ ಇತರೆ ಮೇಲ್ ಮೈ ನೀರು ವೈಜ್ಞಾನಿಕವಾಗಿ ನೀರು ಸಂಗ್ರಹಿಸುವ ಬಹುಪಯೋಗಿ ಚೆಕ್ ಡ್ಯಾಂ ಗಳನ್ನು ಈಗಾಗಲೇ 100 ರಷ್ಟು ನಿರ್ಮಾಣವಾಗಿದ್ದು, ಇನ್ನೂ 500 ಚೆಕ್ ಡ್ಯಾಂಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಉಚಿತವಾಗಿ ಸಸಿ ವಿತರಣೆ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 35 ಲಕ್ಷ ಸಸಿಗಳನ್ನು ನೆಡಲು ತಿಳಿಸಲಾಗಿದ್ದು, ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವ ಹೊತ್ತಿಗೆ ಜಿಲ್ಲೆಯಲ್ಲಿ 50 ಲಕ್ಷ ಸಸಿಗಳನ್ನು ನೆಡಲು ಗುರಿ ಹೊಂದಿದ್ದು, ರೈತರು ಇದರ ಲಾಭವನ್ನು ಪಡೆಯ ಬೇಕೆಂದರು.
ಕನ್ನಡಪರ, ರೈತ ಸಂಘಟನೆಗಳು, ವಿದ್ಯಾರ್ಥಿಗಳು, ಯುವಕರು, ವಾಸವಿ, ರೋಟರಿ , ಸರ್ಕಾರಿ ನೌಕರರ ಸಂಘಗಳು ಸಸಿ ನೆಡುವ ಕಾರ್ಯಕ್ರಮಗಳಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಅರಣ್ಯ ಇಲಾಖೆ ಮೂಲಕ ಅಗತ್ಯ ಇರುವ ರೈತರಿಗೆ, ಸಂಘ, ಸಂಸ್ಥೆಗಳಿಗೆ ಉಚಿತವಾಗಿ ಸಸಿ ನೀಡಲಾಗುವುದು. ಹೆಬ್ಬೇವು, ನೇರಳೆ, ಹೊಂಗೆ, ಮಾವು, ಗೇರು, ಶ್ರೀಗಂಧ ಮರಗಳನ್ನು ನಾಟಿ ಮಾಡಲು ಸಸಿಗಳನ್ನು ವಿತರಿಸಲಾಗುವುದು. ನರೇಗಾ ಮೂಲಕ ಅದರ ಪೋಷಣೆಗೆ ಕೂಲಿ ಹಣ ನೀಡಲಾಗುತ್ತದೆ ಎಂದರು.
ಜಿಪಂ ಉಪಾಧ್ಯಕ್ಷೆ ನಿರ್ಮಲ, ಸಿಇಒ ಗುರುದತ್ ಹೆಗಡೆ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ರವಿಶಂಕರ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್, ಸಾಮಾಜಿಕ ಅರಣ್ಯ ಇಲಾಖೆ ಜೆ.ಶ್ರೀನಾಥ್, ನರೇಗಾ ಸಹಾಯಕ ನಿರ್ದೇಶಕ ಮುನಿರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.