Advertisement
ಬೆಂಗಳೂರು, ನ. 12: ರಾಜ್ಯ ರಾಜಕೀಯದಲ್ಲಿ ಮತ್ತೆ “ಉಡುಗೊರೆ’ ಸದ್ದು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಕೋಟಿ ರೂ. ಬೆಲೆ ಬಾಳುವ ಸೋಫಾ ಸೆಟ್ “ಉಡುಗೂರೆ’ಯಾಗಿ ಬಂದಿದೆ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಇದು ಹ್ಯೂಬ್ಲೋಟ್ ವಾಚ್‌ನ ಅಪ್ಡೆàಟೆಡ್ ವರ್ಷನ್ ಎಂದು ಲೇವಡಿ ಮಾಡಿದ್ದಾರೆ.ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಿವಾಸಕ್ಕೆ ಕೋಟಿ ರೂ.
ಹೆಚ್ಚು ಬೆಲೆಬಾಳುವ ಸೋಫಾ ಸೆಟ್ ಅನ್ನು ಆಪ್ತ ಸಚಿವರೊಬ್ಬರು ವಿದೇಶದಿಂದ ತರಿಸಿ ನೀಡಿದ್ದಾರೆ. ಇದು 1 ಕೋಟಿ 90 ಲಕ್ಷ ರೂ. ಮೌಲ್ಯದ್ದೆಂದು ಹೇಳಲಾಗುತ್ತಿದೆ ಎಂದರು.
ಸಿಎಂ ಮನೆಯಲ್ಲಿ ಕಾನ್ಫರೆನ್ಸ್ ಹಾಲ್ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಎಷ್ಟು ಖರ್ಚು ಮಾಡಿದ್ದಾರೋ ಗೊತ್ತಿಲ್ಲ. ಅದರೊಳಗೆ ಮಾಧ್ಯಮದವರನ್ನು ಬಿಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಅದಕ್ಕೆ ಮಾಡಿರುವ ಖರ್ಚು ಮೂರು ಕೋಟಿ ರೂ.ಗಿಂತಲೂ ಹೆಚ್ಚೋ ಏನೋ ಎಂಬುದು ಗೊತ್ತಿಲ್ಲ. ಈ ಎಲ್ಲದರ ಬಗ್ಗೆ ಸತ್ಯ ಹರಿಶ್ಚಂದ್ರರೇ ಉತ್ತರ ಕೊಡಬೇಕು ಎಂದರು.
ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದನ್ನು ಸ್ವಾಗತಿಸುತ್ತೇನೆ. ನಮ್ಮದು ಲಿಂಗಾಯತ-ಒಕ್ಕಲಿಗರ ಸಂಗಮ ಅಲ್ಲ. ನಮ್ಮ ಉದ್ದೇಶ ಇರುವುದು ರಾಜ್ಯದ ಕೆಟ್ಟ ಸರಕಾರವನ್ನು ಇಳಿಸುವುದಷ್ಟೇ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪಕ್ಷ ನಾಯಕ ಆಯ್ಕೆ ಬಗ್ಗೆ ಅವರು ಹೇಳಿದ್ದಾರೆ. ಆದರೆ, ಬಿಜೆಪಿ ಜತೆ ಜೆಡಿಎಸ್ ವಿಲೀನ ಪ್ರಶ್ನೆಯೇ ಇಲ್ಲ. ಎನ್‌ಡಿಎಗೆ ಬೆಂಬಲ ನೀಡಿದ್ದೇವೆ. ಹೀಗಾಗಿ ಜತೆಗಿದ್ದೇವೆ ಅಷ್ಟೇ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.