Advertisement

ಮೀನಿನ ತ್ಯಾಜ್ಯ ನೀರಲ್ಲೇ ನಳನಳಿಸುವ ಗಿಡಗಳು!

01:45 AM Dec 30, 2020 | Team Udayavani |

ಪುತ್ತೂರು: ಮೀನಿಗೆ ಆಹಾರ ಕೊಟ್ಟರೆ, ಕೃಷಿ ನಳನಳಿಸಿ ಇಬ್ಬಗೆಯಲ್ಲೂ ಆದಾಯ ಕೈ ಸೇರಬಹುದು. ಹೇಗೆಂದು ತಿಳಿಯಬೇಕಿದ್ದರೆ ಬೆಂಗಳೂರಿನಲ್ಲಿ ಆಧುನಿಕ ಪದ್ಧತಿಯ “ಅಕ್ವಾಪೋನಿಕ್ಸ್‌’ ಕೃಷಿಯಲ್ಲಿ ತೊಡಗಿರುವ ಸುಳ್ಯದ ಪೆರುವಾಜೆ ಗ್ರಾಮದ ಕಾನಾವಿನ ಸಾಫ್ಟ್ವೇರ್‌ ಎಂಜಿನಿಯರ್‌ ದಂಪತಿಯ ಸಾವಯವ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಕಾನಾವು ತಿರುಮಲೇಶ್ವರ ಭಟ್‌-ಅನಿತಾ ಭಟ್‌ ದಂಪತಿಯ ಪುತ್ರ ಕಾನಾವು ನರಸಿಂಹ ತೇಜಸ್ವಿ ಮತ್ತು ಪತ್ನಿ ಶ್ವೇತಾ ಕಾನಾವು ಈ ಪ್ರಯೋಗಶೀಲ ಸಾಧಕರು.

Advertisement

ನಳನಳಿಸುತ್ತಿವೆ 5,800 ಗಿಡಗಳು
ಅಮೆರಿಕದ ಉದ್ಯೋಗ ತೊರೆದು 2015ರಲ್ಲಿ ಬೆಂಗಳೂರಿಗೆ ಆಗಮಿಸಿದ ತೇಜಸ್ವಿ ದಂಪತಿ ಕನಕಪುರ ರಸ್ತೆಯ ಎಡುಮಡು ಹಾರೋಹಳ್ಳಿ ಹತ್ತಿರ 3,000 ಚದರ ಅಡಿ ವಿಸ್ತೀರ್ಣದಲ್ಲಿ “ಕಾನಾವು ಜಲಜಶ್ರೀ ಫಾಮ್ಸ್‌ì ಅಕ್ವಾಫೋನಿಕ್ಸ್‌’ ಕೃಷಿ ಆರಂಭಿಸಿದರು. ಇಲ್ಲಿ 1,200 ಮೀನುಗಳನ್ನು ಮೂರು ತೊಟ್ಟಿಗಳಲ್ಲಿ ಸಾಕುತ್ತಿದ್ದಾರೆ.

ಅವುಗಳ ತ್ಯಾಜ್ಯ ಕೊಳವೆಯ ಮಾದರಿಯೊಳಗೆ ಹರಿ ಯುತ್ತ¤ ಗಿಡಗಳಿಗೆ ಆಹಾರವಾಗುತ್ತದೆ ಕೊಳವೆಯೊಳಗೇ ಗಿಡಗಳನ್ನು ಬೆಳೆಯಲಾಗುತ್ತಿದೆ. ಗಿಡವು ಅಗತ್ಯವಿರುವ ಆಹಾರವನ್ನು  ಹೀರಿದ ಬಳಿಕ ನೀರು ಮತ್ತೆ ಮೀನಿನ ತೊಟ್ಟಿಯನ್ನು ಸೇರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿರುವ ಕಾರಣ ಗಿಡಗಳ ಬೆಳವಣಿಗೆ ಸಾದಾ ಕೃಷಿಗಿಂತ ಹೆಚ್ಚು ವೇಗವಾಗಿರುತ್ತದೆ. ಇದು ಸಂಪೂರ್ಣ ಸಾವಯವ ಕೃಷಿ ಎನ್ನುತ್ತಾರೆ ನರಸಿಂಹ ತೇಜಸ್ವಿ.

26 ಕಿ.ಮೀ. ಪಯಣ
ವಾಸ ಸ್ಥಳದಿಂದ 26 ಕಿ.ಮೀ. ದೂರದಲ್ಲಿ ಈ ಫಾಮ್ಸ್‌ì ಇದೆ. ನರಸಿಂಹ ತೇಜಸ್ವಿ ಸಾಫ್ಟ್ವೇರ್‌ ಉದ್ಯೋಗಿ. ಪತ್ನಿ ಶ್ವೇತಾ ಉದ್ಯೋಗ ತೊರೆದು ಕೃಷಿಯಲ್ಲಿ ತೊಡಗಿದ್ದಾರೆ. ಎರಡು ದಿನಗಳಿಗೊಮ್ಮೆ ಫಾಮ್ಸ್‌ìಗೆ ತೆರಳಿ ಕೃಷಿಯನ್ನು ಗಮನಿಸುತ್ತಾರೆ. ಓರ್ವ ಸಿಬಂದಿಯನ್ನು ನಿಯೋಜಿಸಿದ್ದಾರೆ. ಭವಿಷ್ಯದಲ್ಲಿ ಈ ಕೃಷಿಯನ್ನು ವಿಸ್ತರಿಸುವ ಕನಸು ಹೊಂದಿದ್ದಾರೆ.

ದಿನಬಳಕೆಯ ತರಕಾರಿಗಳನ್ನು ಮನೆಯ ತಾರಸಿಯಲ್ಲಿ ಬೆಳೆಯುತ್ತಿದ್ದ ಈ ದಂಪತಿ, ಹೊಸ ಕೃಷಿಯ ಅನ್ವೇಷಣೆಯಲ್ಲಿ ತೊಡಗಿದಾಗ ಅಕ್ವಾಫೋನಿಕ್ಸ್‌ ಕೃಷಿ ಪದ್ಧತಿಯ ಮಾಹಿತಿ ದೊರೆಯಿತು. ಗ್ರೋ ಅಕ್ವಾಫೋನಿಕ್ಸ್‌ನ ಸತ್ಯನಾರಾಯಣ ಸಹಕಾರ ನೀಡಿದರು. ತರಬೇತಿ ಕಾರ್ಯಾಗಾರಗಳಲ್ಲಿ ಮಾಹಿತಿ ಪಡೆದುಕೊಂಡರು.

Advertisement

ಮಣ್ಣಿನ ಸ್ಪರ್ಶವಿಲ್ಲ
ಈ ಕೃಷಿಯಲ್ಲಿ ಮಣ್ಣಿನ ಸಂಪರ್ಕವೇ ಇಲ್ಲ. ಮೀನು ಸಾಕಣೆಯೇ ಮುಖ್ಯ ಭಾಗ. ಮೀನಿಗಷ್ಟೇ ಆಹಾರ ಕೊಟ್ಟರಾಯಿತು. ಅವುಗಳ ವಿಸರ್ಜನೆ ಬೆಳೆಗೆ ಆಹಾರ. ಬ್ಯಾಕ್ಟೀರಿಯ ಬಳಸಿ ಅಮೋನಿಯಾವನ್ನು ಬೆಳೆಗೆ ಬೇಕಾದ ರೂಪಕ್ಕೆ ಶೋಧಿಸಿ ನೀಡಲಾಗುತ್ತದೆ. ಮನೆಯ ತಾರಸಿ ಮೇಲೂ ಈ ಕೃಷಿ ಮಾಡಬಹುದು. ಆದಾಯ ಗಳಿಕೆ ಉದ್ದೇಶವಿದ್ದರೆ ವಿಸ್ತೃತ ಜಾಗದಲ್ಲಿ ಸೂಕ್ತ.

ಎರಡು ರೀತಿಯ ಆದಾಯ
ಇಲ್ಲಿ ಮೀನು ಮತ್ತು ಕೃಷಿಯಿಂದ ಆದಾಯ ದೊರೆಯುತ್ತದೆ. ಆರು ತಿಂಗಳಿಗೊಮ್ಮೆ ಅಕ್ವೇರಿಯಂ ಮೀನು (ಯಾವುದೇ ಮೀನು) ಮಾರಾಟ ಸಾಧ್ಯವಾಗುತ್ತದೆ. ಬೆಳೆಯುವ ಗಿಡವು ಫಸಲು ಕೊಡುವ ಕಾಲಮಾನ ಆಧರಿಸಿ ಆದಾಯ ಸಿಗುತ್ತದೆ. ಆದಾಯದ ದೃಷ್ಟಿಯಿಂದ ಒನಿಯನ್‌ ಚೈಪ್ಸ್‌, ಬೊಕ್‌ ಚಾಯ್‌ ಮುಖ್ಯ ಕೃಷಿ. ಇದಕ್ಕೆ ಸ್ಥಳೀಯ ಮತ್ತು ವಿದೇಶಗಳ ಮಾರುಕಟ್ಟೆಗಳಲ್ಲಿ ಬೇಡಿಕೆಯಿದೆ. ಟೊಮೊಟೋ, ಪುದಿನ ಮೊದಲಾದವುಗಳನ್ನು ಬೆಳಸಲಾಗುತ್ತಿದೆ.

ನಮ್ಮದು ಕೃಷಿ ಕುಟುಂಬ. ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿರುವ ಮಗ ಮತ್ತು ಸೊಸೆ ಬೆಂಗಳೂರಿನಲ್ಲಿ ಅಕ್ವಾಫೋನಿಕ್ಸ್‌ ಕೃಷಿ ಮೂಲಕ ಯಶಸ್ಸು ಕಂಡುಕೊಂಡಿದ್ದಾರೆ. ಊರಲ್ಲೂ ಅನುಷ್ಠಾನಿಸುವ ಇರಾದೆ ಹೊಂದಿದ್ದಾರೆ. ಅದಕ್ಕೆ ನಮ್ಮ ಪೂರ್ಣ ಬೆಂಬಲ ಇದೆ. – ತಿರುಮಲೇಶ್ವರ ಭಟ್‌ ಕಾನಾವು ನರಸಿಂಹ ತೇಜಸ್ವಿ ಅವರ ತಂದೆ

Advertisement

Udayavani is now on Telegram. Click here to join our channel and stay updated with the latest news.

Next