Advertisement

ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ಗೆ ಚಾಲನೆ

03:18 PM Aug 15, 2020 | Suhan S |

ಲಕ್ಷ್ಮೇಶ್ವರ: ರೈತರು ಬೆಳೆವಿಮೆ, ಬೆಳೆನಷ್ಟ ಪರಿಹಾರ, ಬೆಳೆಸಾಲ, ಸಹಾಯಧನ ಸೇರಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ರೈತರೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರವನ್ನು ಸ್ವಯಂ ದಾಖಲಿಸಿಕೊಳ್ಳುವ ಮೊಬೈಲ್‌ ಆ್ಯಪ್‌ ವ್ಯವಸ್ಥೆ ಮಾಡಿದೆ. ಆ. 24ರೊಳಗೆ ರೈತರು ಆ್ಯಂಡ್ರಾಯ್ಡ ಮೊಬೈಲ್‌ ಮೂಲಕ ಬೆಳೆ ದೃಢೀಕರಣ ಮಾಡಿಕೊಳ್ಳಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Advertisement

ಅವರು ಶುಕ್ರವಾರ ರೈತರ ಬೆಳೆ ಸಮೀಕ್ಷೆ ಮೊಬೈಲ್‌ ಅಪ್ಲಿಕೇಶನ್‌(2020-21) ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಸರ್ಕಾರ ಬಡವರು, ಕೂಲಿಕಾರರು, ರೈತರು ಸೇರಿ ಎಲ್ಲ ವರ್ಗದ ಜನರಿಗೂ  ಯೋಜನೆಗಳು ನೇರವಾಗಿ ತಲುಪಬೇಕು ಎಂಬ ದೃಢ ನಿಲುವು ತಾಳಿದೆ. ಈ ನಿಟ್ಟಿನಲ್ಲಿ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದ್ದು, ಜನರುಸೌಲಭ್ಯಕ್ಕಾಗಿ ಸರ್ಕಾರಿ ಕಚೇರಿಗೆ ಅಲೆಯುವುದು ತಪ್ಪಿದೆ. ಕೃಷಿಕರ ಏಳ್ಗೆಗಾಗಿ ಬೆಂಬಲ ಬೆಲೆ, ಬೆಳೆವಿಮೆ, ಕೃಷಿ ಸಮ್ಮಾನ ಸಹಾಯಧನದಂತಹ ಯೋಜನೆಗನ್ನು ಜಾರಿಗೊಳಿಸಿದೆ. ರೈತರೇ ತಮ್ಮ ಮೊಬೈಲ್‌ ಮೂಲಕ ಬೆಳೆಗಳ ವಿವರಣೆ ದಾಖಲಿಸುವುದರಿಂದ ಯಾರಿಗೂ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಹಿತಿ ದಾಖಲಾಗುವುದಿಲ್ಲ. ಆದ್ದರಿಂದ ಸರ್ಕಾರ ರೈತರ ಅನುಕೂಲಕ್ಕಾಗಿ ನೀಡುವ ಸೌಲಭ್ಯ ಪಡೆಯಲು ತಪ್ಪದೇ ಎಲ್ಲರೂ ಬೆಳೆ ವಿವರ ದಾಖಲಿಸಬೇಕು. ಇದರಿಂದಾಗಿ ರೈತರು ಸೌಲಭ್ಯದಿಂದ ವಂಚಿತರಾಗುವುದು ತಪ್ಪುತ್ತದೆ ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಅವರು ಆ್ಯಪ್‌ ಕುರಿತು ಮಾಹಿತಿ ನೀಡಿದರು. ಶುಕ್ರವಾರ ಕುಂದ್ರಳ್ಳಿ, ಗೊಜನೂರ, ಅಕ್ಕಿಗುಂದ ಭಾಗದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next