Advertisement
ಸಮೀಕ್ಷೆ ಅನಿವಾರ್ಯ: ಜಿಲ್ಲೆಯ 486620 ಫ್ಲ್ಯಾಟ್‌ಗಳಲ್ಲಿ 88500 ಫ್ಲ್ಯಾಟ್‌ಗಳ ಬೆಳೆ ಸಮೀಕ್ಷೆಯಾಗಿದ್ದು ನೆಲಮಂಗಲದಲ್ಲಿ 107693 ಫ್ಲ್ಯಾಟ್‌ಗ ಳಲ್ಲಿ ರೈತರು ತಮ್ಮ ಮೊಬೈಲ್‌ಗ ಳಲ್ಲಿ 24500 ಫ್ಲ್ಯಾಟ್‌ಗಳನ್ನು ಮಾತ್ರ ಬೆಳೆ ಸಮೀಕ್ಷೆ ನಡೆಸಿದ್ದಾರೆ. ಈ ಮೂಲಕ ಇನ್ನೂ ಶೇ.78 ಬೆಳೆ ಸಮೀಕ್ಷೆ ನಡೆಸುವ ಅನಿವಾರ್ಯತೆ ಇದೆ. ಸಮೀಕ್ಷೆ ನಡೆಸುವ ರೈತರ ಹೊಲಗಳಿಗೆ ರೈತರು ಬರುತ್ತಿಲ್ಲವಾದ್ದ ರಿಂದ ವಿಳಂಬವಾಗುತ್ತಿರುವುದುಕಂಡುಬಂದಿದೆ. ರೈತರ ಜತೆ ಪಿಆರ್‌ಗ ಳನ್ನು ನೇಮಕ ಮಾಡಲಾಗಿದ್ದರೂ ರೈತರಿಂದ ಸ್ಪಂದನೆ ಸಿಗುತಿಲ್ಲ.
Related Articles
Advertisement
ಬೆಂಗಳೂರು ನಗರಕ್ಕೆಹೊಂದಿಕೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಬಹಳಷ್ಟು ಜನ ಭೂ ಮಾಲೀಕರಾಗಿದ್ದಾರೆ.ಖಾಲಿ ಪ್ರದೇಶವಿದ್ದರೆಯಾವುದೇ ಬೆಳೆ ಬೆಳೆದಿಲ್ಲ ಎಂದು ನಮೂದಿಸ ಬೇಕು. ಸರ್ಕಾರದ ಗಮನಕ್ಕೆ ಬೆಳೆ ವಿವರ ತರದಿದ್ದಲ್ಲಿಕಾನೂನುಕ್ರಮ ಕೈಗೊಳ್ಳಲಾಗುವುದು. ರೈತರು ರಾಗಿ ಬೆಂಬಲ ಬೆಲೆ ಹಾಗೂ ವಿವಿಧ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಅನಿವಾರ್ಯ. –ಪಿ.ರವೀಂದ್ರ, ಜಿಲ್ಲಾಧಿಕಾರಿ
ಪಿಆರ್‌ಗಳ ಸಹಾಯ ಪಡೆದು ಬೆಳೆ ಸಮೀಕ್ಷೆಗೆ ರೈತರು ಕೈಜೋಡಿಸಬೇಕು, ಬೆಳೆ ಸಮೀಕ್ಷೆ ಮಾಡುವುದರಿಂದ ರೈತರು ಸರ್ಕಾರದಿಂದ ಪಡೆಯುವ ವಿವಿಧ ಸೌಲಭ್ಯಗಳಿಗೆ ಬಹಳಷ್ಟು ಅನುಕೂಲವಾಗಲಿದೆ. –ಡಾ.ರಾಘವೇಂದ್ರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ