Advertisement

ಹಳೆನಂದಗಾಂವ ಜಲಾವೃತ- ಸಾವಿರಾರು ಎಕರೆ ಬೆಳೆ ಹಾನಿ

03:56 PM Aug 19, 2020 | Suhan S |

ಮಹಾಲಿಂಗಪುರ: ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ನದಿ ಪಾತ್ರದ ಗ್ರಾಮಗಳು ಮತ್ತೇ ಪ್ರವಾಹಕ್ಕೆ ಸಿಲುಕಿವೆ.

Advertisement

ಕಾಳಜಿ ಕೇಂದ್ರ ಪ್ರಾರಂಭ: ಹಳೆನಂದಗಾಂವ ಗ್ರಾಮದ ಜನರಿಗೆ ಪರಿಹಾರ ಕೇಂದ್ರವನ್ನು ತೆರೆಯಲಾಗಿದ್ದು. ಸೋಮವಾರ ರಾತ್ರಿಯಿಂದಲೇ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಸುಮಾರು 20ಕ್ಕೂ ಅಧಿಕ ಜನರು ವಾಸವಿದ್ದಾರೆ. ನಂದಗಾಂವ ಗ್ರಾಮದ ಜನತೆಯು ಪ್ರತಿವರ್ಷ ಪ್ರವಾಹ ತೊಂದರೆ ಎದುರಾಗುತ್ತಿರುವುದರಿಂದ ನಮಗೆ ವಸತಿ ಶಾಶ್ವತ ಪರಿಹಾರವನ್ನು ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಾವಿರಾರು ಎಕರೆ ಬೆಳೆ ಹಾನಿ: ಪ್ರವಾಹದಿಂದಾಗಿ ಅಕ್ಕಿಮರಡಿ, ಮಿರ್ಜಿ, ನಂದಗಾಂವ, ಅವರಾದಿ, ಢವಳೇಶ್ವರ ಗ್ರಾಮಗಳಲ್ಲಿ ಸಾವಿರಾರು ಎಕರೆ ಬೆಳೆ ಜಲಾವೃತವಾಗಿ ಬೆಳೆಹಾನಿಯಾಗಿದೆ. ಘಟಪ್ರಭಾ ನದಿಗೆ ನಿರಂತರವಾಗಿ ನೀರು ಏರಿಕೆಯಾಗುತ್ತಿರುವ ಕಾರಣ, ಮಂಗಳವಾರ ಹಳೆನಂದಗಾವ ಜಲಾವೃತವಾಗಿ ನಡುಗಡ್ಡೆಯಾಗಿದೆ.

ಗ್ರಾಮದಲ್ಲಿ ಆಸರೆ ಮನೆ ಹಂಚಿಕೆ ಮಾಡಿ ಉಳಿದವರಿಗೆ ಸರ್ಕಾರ ಜಾಗ ಖರೀದಿಸಿ ನೀಡಬೇಕು. ಪ್ರತಿ ವರ್ಷ ಪ್ರವಾಹದಿಂದ ಆಗುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಬೆಳೆ ಹಾನಿ ಸಮೀಕ್ಷೆ ಮಾಡಿ ಬೆಳೆ ಪರಿಹಾರ ನೀಡಬೇಕು ಎಂದು ಗ್ರಾಪಂ ಮಾಜಿ ಸದಸ್ಯ  ರಾಮಚಂದ್ರ ಜಾಧವ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next