Advertisement

ಬೆಳೆನಷ್ಟ; ಪರಿಹಾರಕ್ಕೆ ಭಂಕಲಗಿ ಆಗ್ರಹ

06:38 PM Aug 10, 2022 | Team Udayavani |

ಚಿತ್ತಾಪುರ: ತಾಲೂಕಿನ ಕರದಾಳ ರಸ್ತೆಯಲ್ಲಿ ನಿರ್ಮಾಣವಾದ ಶ್ರೀ ಸಿಮೆಂಟ್‌ ಸೂಲಹಳ್ಳಿ ರೈಲ್ವೆ ಪ್ಲಾಂಟ್‌ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹೊಲಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹೀಗಾಗಿ ಕೂಡಲೇ ರೈತರಿಗೆ ಬೆಳೆ ಪರಿಹಾರ ನೀಡಬೇಕೆಂದು ಪುರಸಭೆ ವಿಪಕ್ಷ ನಾಯಕ ನಾಗರಾಜ ಭಂಕಲಗಿ ಆಗ್ರಹಿಸಿದರು.

Advertisement

ಕರದಾಳ ರಸ್ತೆಯಲ್ಲಿ ಕಾಮಗಾರಿ ನಡೆಯುವ ಸ್ಥಳಕ್ಕೆ ರೈತರೊಂದಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಸಿಮೆಂಟ್‌ ಕಂಪನಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಿಸಿ ರಸ್ತೆ ನಿರ್ಮಿಸಿದ್ದಾರೆ. ಇಲ್ಲಿ ರೈತರ ಹಿತವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಹೀಗಾಗಿ ಮೊದಲು ಬೆಳೆ ನಷ್ಟ ಪರಿಹಾರ ನೀಡಬೇಕು. ನಂತರವೇ ಸಿಸಿ ರಸ್ತೆ, ಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿ ಮುಂದುವರಿಸಬೇಕೆಂದು ಒತ್ತಾಯಿಸಿದರು.

ರೈಲ್ವೆ ಪ್ಲಾಂಟ್‌ ನಡೆಯುವ ಸ್ಥಳದಲ್ಲಿದ್ದ ಮೂರು ಹಣದಿಗಳು(ಬಂಡಿ ದಾರಿ) ಈಗ ಅವೈಜ್ಞಾನಿಕ ರಸ್ತೆ ಮತ್ತು ರೈಲ್ವೆ ಪ್ಲಾಂಟ್‌ ನಿರ್ಮಾಣದಿಂದ ಬಂದ್‌ ಆಗಿದೆ. ಇದರಿಂದ ಹೊಲಗಳಿಗೆ ಅರ್ಧ ಕಿ.ಮೀ ಇದ್ದ ಅಂತರ 12 ಕಿ.ಮೀ. ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕಪಡಿಸಿದರು.

ಕಂದಾಯ ಅಧಿಕಾರಿಗಳು ಸಮಗ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ, ಸರಕಾರದ ಪರಿಹಾರ ಜತೆಗೆ ಸಿಮೆಂಟ್‌ ಕಂಪನಿ ವತಿಯಿಂದಲೂ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.

ಒಂದು ವಾರದಲ್ಲಿ ಕಂಪನಿ ಅಧಿ ಕಾರಿಗಳು ಲಿಖೀತ ರೂಪದಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದರೆ ರೈತರನ್ನು ಸಂಘಟಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಕಂದಾಯ ಅಧಿಕಾರಿಗಳಾದ ಮೈನೋದ್ದಿನ್‌, ಮದುಸೂಧನ ಘಾಳೆ, ಕೃಷಿ ಅಧಿಕಾರಿ ಬಸವರಾಜ ಬಂಗರಗಿ, ಪುರಸಭೆ ಸದಸ್ಯರಾದ ರಮೇಶ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಶ್ರೀನಿವಾಸರೆಡ್ಡಿ ಪಾಲಪ್‌, ರೈತ ಮುಖಂಡರಾದ ರಾಜೇಶ ತುರೆ, ಸುವನರೆಡ್ಡಿ, ಸಿದ್ಧಣ್ಣ ಹೊತಿನಮಡಿ, ನಾಗರಾಜ ರೇಷ್ಮಿ, ಅನಿಲ ವಡ್ಡಡಗಿ, ಮಂಜುನಾಥಗೌಡ ಪಾಟೀಲ, ಮಲ್ಲಿಕಾರ್ಜುನ ಪೂಜಾರಿ, ಮೋಹನ ಮುಸ್ತಾಜಾರ್‌, ಬಸಣ್ಣ ತಳವಾರ, ಭೀಮರಾಯ ಹೊತಿನಮಡಿ, ಸತ್ತಾರಸೇಟ್‌ ಗೋಲಾ, ನರಸಪ್ಪ ಭೋವಿ, ಶರಣರೆಡ್ಡಿ ಪಾಲಪ್‌, ಮಲ್ಲಿಕಾರ್ಜುನ ಗಡೆಸೂರ, ವಿಕ್ರಮರೆಡ್ಡಿ ಗಡೆಸೂರ, ವಿಶ್ವರೆಡ್ಡಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next