Advertisement

ಬೆಳೆ ವಿಮೆ ಯೋಜನೆ ಅನುಷ್ಠಾನಕ್ಕೆ ಸರ್ವ ಸಹಕಾರ

12:40 AM Jun 23, 2019 | Sriram |

ಮಂಗಳೂರು: ಬೆಳೆ ವಿಮೆ ಯೋಜನೆಗಳನ್ನು ಕೃಷಿಕರ ಅನುಕೂಲ ಕ್ಕಾಗಿಯೇ ಸರಕಾರ ಜಾರಿಗೊಳಿಸಿದ್ದು, ಕೃಷಿಕರು ಅಧಿಕ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು; ಬೆಳೆ ವಿಮೆ ಯೋಜನೆಗಳ ಅನುಷ್ಠಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸರ್ವ ಪ್ರಯತ್ನ ಮತ್ತು ಸಹಕಾರವನ್ನು ನೀಡ ಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅನುಷ್ಠಾನ ಕುರಿತಂತೆ ಎಸ್‌ಸಿಡಿಸಿಸಿ ಬ್ಯಾಂಕಿನ ಆಶ್ರಯದಲ್ಲಿ ಶನಿವಾರ ಕೊಡಿಯಾಲಬೈಲಿನಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಅವಿಭಜಿತ ದ.ಕ. ಜಿಲ್ಲೆಯ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಜೂ. 30ರ ಒಳಗೆ ಬ್ಯಾಂಕ್‌ ಅಥವಾ ಸಹಕಾರಿ ಸಂಘಗಳ ಮೂಲಕ ನೋಂದಣಿ ಮಾಡಿಸಬೇಕು. ಹೆಚ್ಚು ರೈತ ಸದಸ್ಯರನ್ನು ನೋಂದಾಯಿಸುವ ಸಹಕಾರಿ ಸಂಘಕ್ಕೆ ಬಹುಮಾನ ನೀಡ ಲಾಗುವುದು. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ಪಡೆದ ಸುಮಾರು 80,000 ರೈತರಿದ್ದಾರೆ. ಎಲ್ಲರೂವಿಮೆ ಮಾಡಿಸಬೇಕು ಎಂದರು.

ರುಪೇ ಕಾರ್ಡ್‌ ಬಳಸಿ
ರೈತರಿಗೆ ರುಪೇ ಕಾರ್ಡನ್ನು ದೇಶ ದಲ್ಲಿಯೇ ಮೊದಲ ಬಾರಿಗೆ ಎಸ್‌ಸಿಡಿಸಿಸಿಬ್ಯಾಂಕ್‌ ಪರಿಚಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ರೈತರು ಇದನ್ನು ಪಡೆದು ಅದರ ಮೂಲಕ ವ್ಯವಹಾರ ನಡೆಸಬೇಕು ಎಂದು ಸಲಹೆ ನೀಡಿದರು.

ಚಿನ್ನಾಭರಣಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ಎಸ್‌ಸಿಡಿಸಿಸಿ ಬ್ಯಾಂಕಿಗೆ ಸರಕಾರದ ಅನುಮತಿ ಲಭಿಸಿದೆ ಎಂದು ಮಾಹಿತಿ ನೀಡಿದರು. ದ.ಕ. ಜಿಲ್ಲೆಯಲ್ಲಿ ಬೆಳೆ ಸಾಲವನ್ನು ಅತ್ಯಧಿಕ ಮಂದಿ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಪಡೆದಿದ್ದಾರೆ. ಆದರೆ ಜಿಲ್ಲಾ ಮಟ್ಟದ ಬ್ಯಾಂಕಿಂಗ್‌ ಸಭೆಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗುತ್ತಿಲ್ಲ ಎಂದು ಡಾ| ರಾಜೇಂದ್ರ ಕುಮಾರ್‌ ಬೇಸರಿಸಿದರು.

Advertisement

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಚ್‌.ಆರ್‌. ನಾಯಕ್‌, ಸ. ನಿರ್ದೇಶಕ ಪ್ರವೀಣ್‌, ಕೃಷಿ ಇಲಾಖೆಯ ಸ. ನಿರ್ದೇಶಕರಾದ ವೀಣಾ ಹಾಗೂ ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್‌ ನಾಯಕ್‌ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಬ್ಯಾಂಕಿನ ನಿರ್ದೇಶಕರಾದ ಬಿ.ನಿರಂಜನ್‌, ಭಾಸ್ಕರ್‌ ಎಸ್‌. ಕೋಟ್ಯಾನ್‌,
ಎಂ. ವಾದಿರಾಜ್‌ ಶೆಟ್ಟಿ, ಶಶಿ ಕುಮಾರ್‌ ರೈ ಬಾಲೊÂಟ್ಟು, ಎಸ್‌.ಬಿ. ಜಯರಾಂ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ರಾಜೇಶ್‌ ರಾವ್‌, ಸದಾಶಿವ ಉಳ್ಳಾಲ ಉಪಸ್ಥಿತರಿದ್ದರು.
ಬ್ಯಾಂಕಿನ ಸಿಇಒ ಬಿ. ರವೀಂದ್ರ ಸ್ವಾಗತಿಸಿದರು. ಜನರಲ್‌ ಮ್ಯಾನೇಜರ್‌ ಗೋಪಿನಾಥ್‌ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next