Advertisement
ಉಡುಪಿಗೆ ಹೆಚ್ಚುದ.ಕ., ಮಂಡ್ಯ, ರಾಯಚೂರು, ಶಿವಮೊಗ್ಗ, ಬಾಗಲಕೋಟೆಯನ್ನು ನೀರಾವರಿ ಜಿಲ್ಲೆಗಳೆಂದು ಗುರುತಿಸಲಾಗಿದ್ದು ಶೇ. 25, ಇತರ ಜಿಲ್ಲೆಗಳಿಗೆ ಶೇ. 30 ಪರಿಹಾರ ಮಿತಿ ನಿಗದಿಪಡಿಸಲಾಗಿದೆ. ಈ ಐದು ಜಿಲ್ಲೆಗಳಿಗೆ ಮೂರು ವರ್ಷಗಳ ಅವಧಿಗೆ ವಿಮಾ ಕಂಪೆನಿಗೆ ಟೆಂಡರ್ ಕೂಡಾ ನೀಡಲಾಗಿದೆ.
ತೋಟಗಾರಿಕಾ ಬೆಳೆಗಳಾದ ಅಡಿಕೆ, ಕರಿಮೆಣಸು, ವೀಳ್ಯದೆಲೆ, ದ್ರಾಕ್ಷಿ, ದಾಳಿಂಬೆ, ಲಿಂಬೆ, ಪರಂಗಿ, ಶುಂಠಿ, ಹೂಕೋಸು ಬೆಳೆಗಳನ್ನು ಜು. 10ರ ಒಳಗೆ ನೋಂದಾಯಿಸಬೇಕು. ಮಾವು ಬೆಳೆಯನ್ನು ಜು. 31ರ ಒಳಗೆ, ಹಿಂಗಾರು ಹಂಗಾಮಿನ ಬೆಳೆಗಳಾದ ದ್ರಾಕ್ಷಿ, ಮಾವು, ದಾಳಿಂಬೆ, ಮೆಣಸಿನಕಾಯಿ ಬೆಳೆಗಳನ್ನು ನ. 15ರ ಒಳಗೆ ನೋಂದಾಯಿಸಬೇಕು.
Related Articles
Advertisement
ಕಡ್ಡಾಯ ಅಲ್ಲಬೆಳೆ ಸಾಲ ಪಡೆದ ರೈತರಿಗೆ ಸಹಕಾರಿ ಸಂಸ್ಥೆಗಳು, ಬ್ಯಾಂಕುಗಳು ಕಡ್ಡಾಯ ಬೆಳೆವಿಮೆ ಮಾಡಿಸುತ್ತಿವೆೆ. ಆದರೆ ಸರಕಾರದ ಸುತ್ತೋಲೆಯಂತೆ ಬೆಳೆವಿಮೆ ಕಡ್ಡಾಯವಲ್ಲ. ಬೆಳೆ ಸಾಲ ಪಡೆದ ರೈತ ಬೆಳೆವಿಮೆ ನೋಂದಣಿಗಿಂತ 7 ದಿನಗಳ ಮುಂಚೆ ತನಗೆ ಬೆಳೆವಿಮೆ ಅಗತ್ಯವಿಲ್ಲ ಎಂದು ಅಫಿದವಿತ್ ನೀಡಿದರೆ ಅವರನ್ನು ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗುವುದು. ಆದರೆ ಅಂತಹ ರೈತರಿಗೆ ಬೆಳೆ ನಷ್ಟವಾದಾಗ ಯಾವುದೇ ವಿಮಾ ಪರಿಹಾರ ದೊರೆಯುವುದಿಲ್ಲ. ಬೆಳೆ ವಿಮೆಯಿಂದ ರೈತರು ದೂರ ಸರಿಯಲು ಕಾರಣ ವಿಮೆಯನ್ನು ಘಟಕವಾಗಿ ಪರಿಗಣಿಸಿರುವುದು. ಇಡೀ ಗ್ರಾಮದ ಬೆಳೆ ನಾಶವಾಗದ ಹೊರತು ಇದರಲ್ಲಿ ಒಬ್ಬರು, ಇಬ್ಬರು ರೈತರ ಬೆಳೆ ನಷ್ಟವಾದರೆ ವಿಮಾ ಪರಿಹಾರ ಪಡೆಯಲು ಅವಕಾಶ ಇಲ್ಲ. ಬೆಳೆ ನಾಶವಾಗಿ 72 ಗಂಟೆಗಳ ಒಳಗೆ ರೈತರು ವಿಮಾ ಸಂಸ್ಥೆಗೆ ಮಾಹಿತಿ ನೀಡಿ ಅವರು ಸರ್ವೆ ಮಾಡಿ ಪರಿಹಾರ ಮೊತ್ತವನ್ನು ನೇರ ರೈತರ ಖಾತೆಗೆ ಜಮೆ ಮಾಡುವುದು ಈ ವಿಮೆಯ ಆಶಯ. ಇದಕ್ಕಾಗಿ ಅವರು ಪಂಚಾಯತ್‌ನಲ್ಲಿ ದಾಖಲಾಗುವ ಮಳೆಮಾಪನದ ಅಂಕಿ ಅಂಶವನ್ನು ಅವಲಂಬಿಸುತ್ತಾರೆ. ಇನ್ನೂ ನೋಂದಣಿಗೆ
ಅವಕಾಶ ಇದೆ
ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿ ದಿನಾಂಕ ವಿಸ್ತರಣೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ ಜು.10ರ ವರೆಗೆ ನೋಂದಣಿ ಮಾಡಲು ಸರಕಾರದಿಂದ ಆದೇಶ ಬಂದಿದೆ.
-ಭುವನೇಶ್ವರಿ, ಜಿಲ್ಲಾ ಉಪ ನಿರ್ದೇಶಕಿ,
ತೋಟಗಾರಿಕೆ ಇಲಾಖೆ, ಉಡುಪಿ ವಿಮೆ ಪರಿಹಾರ ಹೆಚ್ಚಿಸಲಿ
ವಿಮೆ ಮೊತ್ತದಲ್ಲಿ ಮಳೆಯಾಗುವ ಜಿಲ್ಲೆಗಳ ನಡುವೆ ತಾರತಮ್ಯ ಸಲ್ಲದು. ಸಾಮೂಹಿಕ ಬೆಳೆ ನಾಶವಾದರೆ ಮಾತ್ರ ಪರಿಹಾರ ದೊರೆಯುವ ಕಾರಣ ಪರಿಹಾರದ ಮೊತ್ತ ಮಿತಿ ಹೆಚ್ಚಿಸಿದಷ್ಟೂ ರೈತರಿಗೆ ಅನುಕೂಲ.
– ವಿಕಾಸ್ ಹೆಗ್ಡೆ ಕೆ.,
ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ