Advertisement

ಬೆಳೆ ವಿಮೆ ಬಾಕಿ ಪ್ರಕರಣಕ್ಕೆ ಶೀಘ್ರ ಅಂತ್ಯ ಹಾಡಿ

11:23 AM Jul 07, 2021 | Team Udayavani |

ಹಾವೇರಿ: 2015-16ನೇ ಸಾಲಿನ ಮುಂಗಾರು ಬೆಳೆ ವಿಮೆ ಬಾಕಿ ಪ್ರಕರಣಗಳಿಗೆ ಸಂಬಂಧಿ ಸಿದಂತೆ ಸಮಸ್ಯೆಗಳನ್ನು ಇತ್ಯರ್ಥಪಡಿಸಿ 15 ದಿನದೊಳಗಾಗಿ ರೈತರ ಖಾತೆಗೆ ಹಣ ಜಮಾ ಮಾಡಬೇಕೆಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಳೆ ವಿಮೆ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ, ಸಹಕಾರಿ ಬ್ಯಾಂಕ್‌ ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ವಿಮಾ ಪಾವತಿಗೆ ಅನುದಾನದ ಕೊರತೆ ಇಲ್ಲ. ಪಾವತಿಗೆ ಬಾಕಿ ಇರುವ ರೈತರ ಪ್ರಕರಣಗಳ ಪೈಕಿ ಅರ್ಹರ ಪಟ್ಟಿಯನ್ನು ತಯಾರಿಸಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

2015-16ನೇ ಸಾಲಿನಲ್ಲಿ ಪಾವತಿಗೆ ಬಾಕಿ ಇರುವ ರೈತರ ದಾಖಲೆಗಳ ಕ್ರಮಬದ್ಧತೆಯನ್ನು ಜಿಲ್ಲಾ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕರು, ನೋಂದಾಯಿತ ವಿಮಾ ಕಂಪನಿ, ಕರ್ನಾಟಕ ಸೆಂಟ್ರಲ್‌ ಕೋ ಆಪ್‌ರೇಟಿವ್‌ ಬ್ಯಾಂಕ್‌ಗಳು ಪ್ರತಿಪ್ರಕರಣಗಳನ್ನು ವಿವರವಾಗಿ ಪರಿಶೀಲಿಸಿ ತ್ವರಿತವಾಗಿವರದಿ ಸಲ್ಲಿಸಬೇಕು. ಸಹಕಾರಿ ಇಲಾಖೆಯ ಜಿಲ್ಲಾನೋಂದಣಾ ಧಿಕಾರಿ ಪರಿಶೀಲನೆಯ ಸಮನ್ವಯನಡೆಸಿ ತ್ವರಿತವಾಗಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದರು.

ವಿವಿಧ ತಾಂತ್ರಿಕ ಕಾರಣಗಳಿಗಾಗಿ ಪಾವತಿಯಾಗದೇ ಉಳಿದಿರುವ ಪ್ರಕರಣಗಳನ್ನು ಪರಿಶೀಲನೆ ನಡೆಸಿಅರ್ಹರನ್ನು ಗುರುತಿಸಿ ಅಂತಹವರಿಗೆ ವಿಮೆ ಹಣ ಹಂಚಿಕೆ ಪ್ರಕ್ರಿಯೆ ತ್ವರಿತವಾಗಿ ಆರಂಭಿಸುವ ಮೂಲಕ ಬೆಳೆ ವಿಮೆ ಗೊಂದಲಕ್ಕೆ ಅಂತ್ಯ ಹಾಡಬೇಕು.ಸಾಧ್ಯವಾದಷ್ಟು ಆದ್ಯತೆ ಮೇಲೆ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಎಸ್‌.ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ಪ್ರಭುದೇವ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್‌, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ, ಸಹಕಾರಿ ಇಲಾಖೆ ಸುಣಗಾರ, ಎಐಸಿ ವಿಮಾ ಕಂಪನಿ ಪ್ರತಿನಿ  ಪ್ರವೀಣ, ಕೆಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಪೂಜಾರ ಇತರರಿದ್ದರು

ಬೆಳೆ ವಿಮೆ ಬಾಕಿಗೆ ಸಂಬಂಧಿಸಿದಂತೆ ವಿವಿಧ ತಾಂತ್ರಿಕ ಕಾರಣಗಳಿಗಾಗಿ ಪಾವತಿಯಾಗದೇ ಉಳಿದಿರುವ ಪ್ರಕರಣಗಳನ್ನು ಪರಿಶೀಲಿಸಿ,ಅರ್ಹರನ್ನು ಗುರುತಿಸಿ ಅಂತಹವರಿಗೆ ವಿಮೆ ಹಣ ಹಂಚಿಕೆ ಪ್ರಕ್ರಿಯೆ ತ್ವರಿತವಾಗಿ ಆರಂಭಿಸುವ ಮೂಲಕ ಬೆಳೆ ವಿಮೆ ಗೊಂದಲಕ್ಕೆ ಅಂತ್ಯ ಹಾಡಬೇಕು.- ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next