Advertisement

ಬಡಕಾನಶಿರಡಾದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದ ಬೆಳೆ ವಿಮಾ ಕಂಪೆನಿ ಅಧಿಕಾರಿಗಳು

10:27 AM Nov 25, 2021 | Team Udayavani |

ದಾಂಡೇಲಿ: ಅಕಾಲಿಕ ಮಳೆಯಿಂದ ಹಾನಿಯಾದ ಬಡಕಾನಶಿರಡಾ ಗ್ರಾಮದ ರೈತರ ಬೆಳೆ ಹಾನಿ ಪ್ರದೇಶಕ್ಕೆ ಬುಧವಾರ ಬೆಳೆ ವಿಮಾ ಕಂಪೆನಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಬಡಕಾನಶಿರಡಾ ಗ್ರಾಮದ ಬಹುಪಾಲು ರೈತರ ಬೆಳೆಗಳು ಮೊನ್ನೆ ಮೊನ್ನೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೀಡಾಗಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಇಂದು ಬಜಾಜ್ ಅಲಾಯನ್ಸ್ ವಿಮಾ ಕಂಪೆನಿಯ ಅಧಿಕಾರಿಗಳಾದ ಎ.ಜಗದೀಶ, ವಿನಾಯಕ ಪಾವಡೆ ಮತ್ತು ಹೊಳೆಪ್ಪ ನವರುಗಳು ಬೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ಹಾನಿಗೊಳಗಾದ ರೈತರನ್ನು ಸಂಪರ್ಕಿಸಿ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.

ಬೆಳೆ ಹಾನಿ ಸಮೀಕ್ಷಾ ಕಾರ್ಯಕ್ಕೆ ಶ್ರೀ.ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೃಷ್ಣ ಪೂಜಾರಿ ಹಾಗೂ ಸಂಘದ ಅಧಿಕಾರಿ ಮನೋಹರ ಪತಕಾಂಡೆ, ಪ್ರಮುಖರುಗಳಾದ ಚಂದ್ರಹಾಸ ಪೂಜಾರಿ, ನಾಮದೇವ ಮಾಡ್ದೋಳ್ಕರ, ನಾರಾಯಣ ದಳವಿ ಹಾಗೂ ಬೆಳೆ ಹಾನಿಗೊಳಗಾದ ರೈತರು ಉಪಸ್ಥಿತರಿದ್ದು ಸಹರಿಸಿದರು.

ಬೆಳೆಹಾನಿಗೊಳಗಾದ ರೈತರಿಗೆ ಯೋಗ್ಯ ರೀತಿಯಲ್ಲಿ ಪರಿಹಾರ ಧನವನ್ನು ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಶ್ರೀ.ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೃಷ್ಣ ಪೂಜಾರಿಯವರು ಬೆಳೆ ವಿಮಾ ಕಂಪೆನಿಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next