Advertisement

Crop Insurance; ಅಡಿಕೆ, ಕಾಳುಮೆಣಸಿಗೆ 78.39 ಕೋಟಿ ರೂ. ಜಮಾ ಆಗಿದೆ

10:37 PM Nov 24, 2023 | Team Udayavani |

ಶಿರಸಿ: 2022-23ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರಕ್ಕೆ ಸಂಬಂಧಿಸಿ 78.39 ಕೋಟಿ ರೂ.ನಷ್ಟು ವಿಮಾ ಪರಿಹಾರದ ಮೊತ್ತ ಆಧಾರ ಲಿಂಕ್ ಆದ ರೈತರ ಉಳಿತಾಯ ಖಾತೆಗೆ ನೇರವಾಗಿ ವಿಮಾ ಕಂಪನಿಯಿಂದ ಜಮಾ ಆಗಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

Advertisement

2022-23 ನೇ ಸಾಲಿನಲ್ಲಿ ಸರಕಾರದ ಆದೇಶದಂತೆ ಮುಂಗಾರು ಅವಧಿಗೆ ಸಂಬಂಧಿಸಿ ಹವಾಮಾನ ಆಧಾರಿತ ಬೆಳೆವಿಮಾ ಯೋಜನೆಯಡಿಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರಕ್ಕೆ ಕೆಡಿಸಿಸಿ ಬ್ಯಾಂಕು ಸಹಕಾರ ಸಂಘಗಳ ಮೂಲಕ ಒಟ್ಟು 79643 ಪ್ರಸ್ತಾವನೆಗಳನ್ನು ಬೆಳೆ ವಿಮಾ ವ್ಯಾಪ್ತಿಗೆ ಒಳಪಡಿಸಿತ್ತು. ಈ ಪೈಕಿ ರೈತರು ಹೊಂದಿರುವ79, 197 ಸರ್ವೆ ನಂಬರುಗಳಿಗೆ ಅಂತೂ78.39 ಕೋಟಿ ರೂ. ವಿಮಾ ಪರಿಹಾರದ ರಖಂ ಘೋಷಣೆ ಆಗಿದ್ದು, ರೈತರ ಆಧಾರ ಲಿಂಕ್ ಆದ ಉಳಿತಾಯ ಖಾತೆಗಳಿಗೆ ಜಮಾ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಪೈಕಿ ಅಂತೂ ಅಡಿಕೆ ಬೆಳೆಗೆ 75776 ಪ್ರಸ್ತಾವನೆಗಳಿಗೆ 77.18 ಕೊಟಿ ರೂ ವಿಮಾ ಪರಿಹಾರ ದೊರಕಿದ್ದು, ಕಾಳುಮೆಣಸು ಬೆಳೆಗೆ ಸಂಬಂಧಿಸಿ ೩೪೨೧ ಪ್ರಸ್ತಾವನೆಗಳಿಗೆ ೧.೨೧ಕೋಟಿ ರೂ. ವಿಮಾ ಪರಿಹಾರ ದೊರಕಿದೆ. ಮಳೆ ಕೊರತೆಯಿಂದ ಬರಗಾಲದ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಬೆಳೆ ವಿಮಾ ಯೋಜನೆಯ ಪರಿಹಾರವು ಜಮಾ ಆಗಿರುವುದು ವರದಾನವಾಗಿದೆ. ಕೇಂದ್ರ, ರಾಜ್ಯ ಸರಕಾರದ ಯೋಜನೆ ಅಳವಡಿಸಿಕೊಂಡು 2022-23 ನೇ ಸಾಲಿನ ಹಂಗಾಮಿಗೆ ಸಂಬಂಧಿಸಿ ಬೆಳೆ ವಿಮೆ ಮೊತ್ತ ರೈತರಿಗೆ ಸಕಾಲದಲ್ಲಿ ದೊರೆತಿರುವುದು ಕೆನರಾ ಡಿ.ಸಿ.ಸಿ. ಬ್ಯಾಂಕು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಗಲಿರುಳು ಶ್ರಮಿಸಿರುವುದರ ಫಲಶೃತಿ ಆಗಿದೆ. ಶಿರಸಿ 2957.62 ಲ. ರೂ. ಸಿದ್ದಾಪುರ1348.03 ಲ.ರೂ., ಮುಂಡಗೋಡ 926.23 ಲ.ರೂ., ಯಲ್ಲಾಪುರ 1678.13 ಲ.ರೂ., ಜೊಯಿಡಾ131.00 ಲ.ರೂ., ಅಂಕೋಲಾ462.82 ಲ.ರೂ., ಕುಮಟಾ 52.82 ಲ.ರೂ, ಹೊನ್ನಾವರ 176.00 ಲ.ರೂ., ಭಟ್ಕಳ106.68 ಲ.ರೂ. ವಿಮೆ ಬಿಡುಗಡೆಗೊಂಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next