Advertisement
ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಸೂಚನೆ ಮೇರೆಗೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆ ನಡೆಸಿದ ಅವರು, ಪಕ್ಕಾ ಮನೆ ಪೂರ್ಣ ಹಾನಿಗೀಡಾಗಿದ್ದರೆ 5 ಲಕ್ಷ ರೂ., ಕಚ್ಚಾಮನೆ ಪೂರ್ಣ ಹಾನಿಯಾಗಿದ್ದರೆ 3 ಲಕ್ಷ ರೂ., ಭಾಗಶಃ ಹಾನಿಯಾಗಿದ್ದರೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದರು.
Related Articles
Advertisement
ಸಭೆಗೂ ಮುನ್ನ ಆರ್‌ಆರ್‌ಟಿ ಸೆಕ್ಷನ್‌ಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಬೀಳಗಿ, ರೈತರನ್ನು ಅನವಶ್ಯಕವಾಗಿ ಅಲೆದಾಡಿಸಬಾರದು. ನಿಗದಿತ ಸಮಯದೊಳಗೆ ಅರ್ಜಿ ವಿಲೇ ಮಾಡಬೇಕೆಂದು ಸಿಬ್ಬಂದಿಗೆ ಸೂಚಿಸಿದರು. ಮೋಜಿಣಿ ವಿಭಾಗದಲ್ಲಿ ವಿಳಂಬವಾಗಿದ್ದ ಅರ್ಜಿಯೊಂದನ್ನು ಜೂನ್ ತಿಂಗಳೊಳಗೆ ವಿಲೇ ಮಾಡಬೇಕೆಂದು ತಾಕೀತು ಮಾಡಿದರು. ರೈತ ಸಂಘದ ಕಾರ್ಯದರ್ಶಿ, ವಕೀಲ ಎಸ್. ಮಂಜುನಾಥ್, ಉಪಾಧ್ಯಕ್ಷ ಹಳ್ಳಿಹಾಳು ಹನುಮಂತಪ್ಪ, ಬಿಎಸ್ಪಿ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ಸಿಪಿಐ (ಎಂಎಲ್)ನ ಎಸ್. ಬೀರಪ್ಪ, ಉಪವಿಭಾಗಾಧಿಕಾರಿ ಎನ್. ದುರ್ಗಾಶ್ರೀ, ತಹಶೀಲ್ದಾರ್ ಡಾ| ಎಂ.ಬಿ. ಅಶ್ವತ್ಥ, ಸಹಾಯಕ ಕೃಷಿ ನಿರ್ದೇಶಕ ನಾರನಗೌಡ, ಬಿಇಒ ಬಿ.ಸಿ. ಸಿದ್ದಪ್ಪ, ನಗರಸಭೆ ಪೌರಾಯುಕ್ತ ಬಸವರಾಜಪ್ಪ, ಎಇಇ ಎಸ್. ಎಸ್. ಬಿರಾದಾರ್ ಇದ್ದರು.
ಕೆರೆ ಒತ್ತುವರಿ ತೆರವಿಗೆ ಮನವಿ
ಬಗರ್‌ಹುಕುಂ ಜಮೀನಿನ ಅರ್ಜಿಗಳನ್ನು ಕೂಡಲೇ ಪರಿಶೀಲಿಸಬೇಕು. ಜಲಾವೃತವಾಗುವ ಡಿ.ಬಿ. ಕೆರೆ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಅಥವಾ ಬೇರೆಡೆ ಜಮೀನು ಮಂಜೂರು ಮಾಡಬೇಕು. ಜಿಲ್ಲೆಯಲ್ಲಿನ 600 ಸಣ್ಣ, ದೊಡ್ಡ ಕೆರೆಗಳ ಜಾಗ ಒತ್ತುವರಿಯಾಗಿದ್ದು ತೆರವುಗೊಳಿಸಬೇಕೆಂದು ಒತ್ತಾಯಿಸಿ ರೈತ ಮುಖಂಡ ಬಲ್ಲೂರು ರವಿಕುಮಾರ್ ಅವರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.