ಬೆಳಗಾವಿ: ಅತಿವೃಷ್ಟಿ, ಅಕಾಲಿಕ ಮಳೆಯಿಂದಾಗಿರುವ ಬೆಳೆ ನಷ್ಟಕ್ಕೆ ಕೇಂದ್ರ ಸರಕಾರದಿಂದ ನೀಡ ಲಾಗುವ ಮೊತ್ತದ ಜತೆಗೆ ರಾಜ್ಯದ ಬೊಕ್ಕಸ ದಿಂದಲೂ ಅಷ್ಟೇ ಪ್ರಮಾಣದ ಪರಿಹಾರ ನೀಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಬೆಳೆಹಾನಿಗೆ ಸಂಬಂಧಿಸಿ ಸದನದಲ್ಲಿ ಸರಕಾರ ಉತ್ತರ ಒದಗಿಸಿದ ಬಳಿಕ ಮಂಗಳವಾರ ಮುಖ್ಯಮಂತ್ರಿ ಈ ನಿರ್ಧಾರ ಪ್ರಕಟಿಸಿದರು.
ಬರಪೀಡಿತ ಪ್ರದೇಶದಲ್ಲೂ ಕಳೆದ ಅಕ್ಟೋಬರ್, ನವೆಂಬರ್‌ನಲ್ಲಿ ಅತ್ಯಂತ ಹೆಚ್ಚು ಮಳೆ ಸುರಿದ ಪರಿಣಾಮ ಅಲ್ಲೂ ನಷ್ಟವಾಗಿದೆ. ಬೆಳೆ ಪರಿಹಾರ ವನ್ನು ಹೆಚ್ಚಳ ಮಾಡಬೇಕೆಂಬ ನಿಟ್ಟಿ ನಲ್ಲಿ ಹಲವರ ಬೇಡಿಕೆಗಳನ್ನು ಪರಿಗಣಿಸಿದಾಗ ಈ ಸಲಹೆ ನಮಗೂ ಸೂಕ್ತ ವೆಂದು ಕಂಡುಬಂದಿದ್ದನ್ನು ಪರಿಗಣಿಸಿ ಹೆಚ್ಚಳ ಮಾಡಲಾಗುತ್ತಿದೆ ಎಂದರು.
ಪರಿಹಾರದ ಮೊತ್ತವನ್ನು ನೇರ ವಾಗಿ ರೈತರ ಖಾತೆಗಳಿಗೆ ಜಮೆ ಮಾಡ ಲಾಗುವುದು. ತೋಟಗಾರಿಕೆ ಬೆಳೆ ನಷ್ಟಕ್ಕೆ ಸಂಬಂಧಿಸಿ ಹೆಕ್ಟೇರ್‌ಗೆ ಎನ್‌ಡಿಆರ್‌ಎಫ್ ಪ್ರಕಾರ 18 ಸಾವಿರ ರೂ. ನೀಡುತ್ತಿದ್ದು, ರಾಜ್ಯ ಸರಕಾರದಿಂದಲೂ 10 ಸಾವಿರ ರೂ. ಸೇರಿಸಿ 28 ಸಾವಿರ ರೂ. ಪಾವತಿಸಲಾಗುವುದು. ಈಗಾ ಗಲೇ ಪರಿಹಾರದ ಕಂತು ಪಡೆದು ಕೊಂಡ ವ ರಿಗೆ ಮುಂದಿನ ಹಂತದಲ್ಲಿ ಮೊತ್ತ ಪಾವತಿ ಯಾಗಲಿದೆ. ಇನ್ನುಳಿದ ಎಲ್ಲ ರೈತರಿಗೆ ಸರ್ವೇ ವರದಿಯ ಪ್ರಕಾರ ತಪ್ಪದೇ ಪರಿಹಾರ ಮೊತ್ತ ಕೈ ಸೇರಲಿದೆ ಎಂದರು.
ಇದನ್ನೂ ಓದಿ:“ಭಾರತ ವಿರೋಧಿ ಕೃತ್ಯ’: 20 ಯೂಟ್ಯೂಬ್ ಚಾನೆಲ್, 2 ವೆಬ್‌ಸೈಟ್ ಬ್ಲಾಕ್
1,200 ಕೋಟಿ ರೂ. ಹೊರೆ
ಹೆಚ್ಚುವರಿ ಬೆಳೆ ಹಾನಿ ಪರಿಹಾರ ನೀಡುವುದರಿಂದ ರಾಜ್ಯ ಸರಕಾರಕ್ಕೆ 1,200 ಕೋಟಿ ರೂ. ಹೊರೆಯಾಗಲಿದೆ. ಇದನ್ನು ಸರಕಾರ ನಿಭಾಯಿಸಲಿದೆ. ರಾಜ್ಯದ 12 ಲಕ್ಷ 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಗೆ ಈ ಆದೇಶದಿಂದ ಅನುಕೂಲವಾಗಲಿದೆ. 28 ಸಾವಿರ ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ ಆಗಿರುವ ನಷ್ಟಕ್ಕೂ ಹೊಸ ಪರಿಹಾರ ಮೊತ್ತ ದೊರಕಲಿದೆ ಎಂದರು.