Advertisement

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ!

12:07 PM Nov 03, 2015 | Nagendra Trasi |

ಕಾಸರಗೋಡು: ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದೊಳಗೆ “ಬಬಿಯಾ” ಮೊಸಳೆ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಈ ದೇವಸ್ಥಾನ ಕೆರೆಯ ಮಧ್ಯದದಲ್ಲಿದ್ದು, ಮಂಗಳೂರಿನಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿ ಈ ದೇವಸ್ಥಾನವಿದೆ.

Advertisement

ದೇವಸ್ಥಾನದ ಕೆರೆಯಲ್ಲಿ ವಾಸವಾಗಿರುವ ದೇವರ ಮೊಸಳೆ ಎಂದೇ ಭಕ್ತರು ನಂಬಿರುವ “ಬಬಿಯಾ” ಎನ್ನುವ ಮೊಸಳೆ ದೇವಸ್ಥಾನದ ಗರ್ಭಗುಡಿ ಸಮೀಪ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ದೇವಾಲಯದ ಮೂಲಗಳ ಪ್ರಕಾರ, ದೇವಸ್ಥಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಬಬಿಯಾ ಗರ್ಭಗುಡಿ ಒಳಗೆ ಪ್ರವೇಶಿಸಿರುವುದಾಗಿ ತಿಳಿಸಿದೆ.

ಕುಂಬಳೆಯ ಶ್ರೀಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಕೆರೆಯಲ್ಲಿರುವ “ಬಬಿಯಾ” ಮೊಸಳೆಗೆ ಪ್ರತಿನಿತ್ಯ ಪೂಜೆಯ ನಂತರ ನಿರ್ದಿಷ್ಟ ಸ್ಥಳವೊಂದರಲ್ಲಿ ನೈವೇದ್ಯ ಅರ್ಪಿಸುವುದು ವಾಡಿಕೆಯಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

Advertisement

ಕೆರೆಯ ಮಧ್ಯೆ ಇರುವ ಅನಂತಪದ್ಮನಾಭ ಸ್ವಾಮಿಯನ್ನು “ಬಬಿಯಾ” ಮೊಸಳೆ ಕಾವಲು ಕಾಯುವ ಕೆಲಸ ಮಾಡುತ್ತದೆ ಎಂಬ ನಂಬಿಕೆ ಭಕ್ತರದ್ದು. ಕೆರೆಯ ಮಧ್ಯೆದಲ್ಲಿ ಬಬಿಯಾ ಮೊಸಳೆ ವಾಸವಾಗಿದ್ದು, ಇದೇ ಮೊದಲ ಬಾರಿ ದೇವಾಲಯದ ಗರ್ಭಗುಡಿಯೊಳಗೆ ಬಂದು ಅಚ್ಚರಿ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next